ಸಿಪಿಎಂನ ಚುನಾವಣಾ ಕಚೇರಿಗೆ ಆಕ್ರಮಣ

ಕಣ್ಣೂರು: ಕಾಸರಗೋಡು ಲೋಕಸಭಾ ಮಂಡಲದ  ಚುನಾವಣಾ ಪ್ರಚಾರ ಕಚೇರಿಗೆ ಪಯ್ಯನ್ನೂರಿನಲ್ಲಿ ಆಕ್ರಮಣ ಉಂಟಾಗಿದೆ. ಸಿಪಿಎಂ ತಾಮರಕುಳಂಙರ ಬ್ರಾಂಚ್ ಕಮಿಟಿಗೆ ನಿನ್ನೆ ರಾತ್ರಿ ಆಕ್ರಮಣ ನಡೆಸಿದ್ದು, ಇದರಿಂದ ಪೀಠೋಪಕರಣಗಳು, ಚುನಾವಣಾ ಪ್ರಚಾರ ಸಾಮಗ್ರಿಗಳು ನಾಶವಾಗಿದೆ. ಕಚೇರಿಯ ಬೀಗ ಮುರಿದು ಒಳನುಗ್ಗಿದ ಅಕ್ರಮಿಗಳು ಖುರ್ಚಿಗಳನ್ನು ಹಾಗೂ ಅಲ್ಲಿದ್ದ ಸಾಮಗ್ರಿಗಳನ್ನು ನಾಶಪಡಿಸಿರು ವುದಾಗಿ ದೂರಿನಲ್ಲಿ ಹೇಳಲಾಗಿದೆ. ಕಚೇರಿ ಪರಿಸರದಲ್ಲಿದ್ದ ಧ್ವಜಸ್ತಂಭವು ಹಾನಿಯಾದ ಸ್ಥಿತಿಯಲ್ಲಿದೆ. ಸ್ಥಳಕ್ಕೆ ಪಯ್ಯನ್ನೂರು ಪೊಲೀಸರು ತಲುಪಿ ತನಿಖೆ ಆರಂಭಿಸಿದ್ದಾರೆ.

You cannot copy contents of this page