ಸಿಪಿಐ ನೇತಾರನನ್ನು ಕೊಲೆಗೈಯ್ಯಲೆತ್ನಿಸಿದ ಪ್ರಕರಣ: ಇಬ್ಬರು ಆರೋಪಿಗಳಿಗೆ 9 ವರ್ಷ ಕಠಿಣ ಸಜೆ, ಜುಲ್ಮಾನೆ

ಕಾಸರಗೋಡು: ಸಿಪಿಐ ನೇತಾ ರರನನ್ನು ಇರಿದು ಕೊಲೆಗೈಯ್ಯಲೆತ್ನಿಸಿದ ಪ್ರಕರಣದ ಇಬ್ಬರು ಆರೋಪಿಗಳಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ)ದ ನ್ಯಾಯಾಧೀಶೆ ಕೆ. ಪ್ರಿಯ ಅವರು ಒಂಬತ್ತು ವರ್ಷ ಕಠಿಣ ಸಜೆ ಹಾಗೂ 60,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದೆ. ನೀರ್ಚಾಲು ಬಾಂಜತ್ತಡ್ಕದ ರವಿತೇಜ ಬಿ. (31) ಮತ್ತು ನೀರ್ಚಾಲು ಕೈಲಂಕಜೆಯ ಪ್ರದೀಪ್ ರಾಜ್ ಕೆ. ಅಲಿಯಾಸ್ ಕುಟ್ಟ (31) ಎಂಬವರಿಗೆ ಈ ಶಿಕ್ಷೆ ವಿಧಿಸ ಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿಗಳು ಆರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
2016 ಸೆಪ್ಟಂಬರ್ 5ರಂದು ರಾತ್ರಿ 7.30ಕ್ಕೆ ನೀರ್ಚಾಲು ಬಾಂಜತ್ತಡ್ಕದಲ್ಲಿ ಸಿಪಿಐ ನೇತಾರ ಸೀತಾರಾಮ ಎಂಬವರನ್ನು ತಡೆದು ನಿಲ್ಲಿಸಿ ಕಲ್ಲು ಹಾಗೂ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿ ಅವರನ್ನು ಕೊಲೆಗೈಯ್ಯಲೆತ್ನಿಸಿ ರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಬದಿಯಡ್ಕ ಪೊಲೀಸರು ಈ ಇಬ್ಬರು ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿಕೊಂ ಡಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಿಗೆ ಈ ಶಿಕ್ಷೆ ವಿಧಿಸಲಾಗಿದೆ. ಅಂದು ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆಗಿದ್ದು, ಈಗ ಹೊಸದುರ್ಗ ಡಿವೈಎಸ್ಪಿ ಆಗಿರುವ ಬಾಬು ಪೆರಿಂuಟಿಜeಜಿiಟಿeಜತ್ ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಹೆಚ್ಚುವರಿ ಸರಕಾರಿ ಪ್ಲೀಡರ್ ಚಂದ್ರಮೋಹನ್ ಜಿ. ಮತ್ತು ನ್ಯಾಯವಾದಿ ಚಿತ್ರಕಲ ವಾದಿಸಿದರು.

You cannot copy contents of this page