ಸೀತಾಂಗೋಳಿ ಕಿನ್ಫ್ರಾ ಪಾರ್ಕ್‌ನಿಂದ 10 ಲಕ್ಷ ರೂ.ಗಳ ಚಪ್ಪಲಿ ಕಳವು: ನಾಲ್ಕು ಮಂದಿ ನಾಟಕೀಯ ರೀತಿಯಲ್ಲಿ ಕಸ್ಟಡಿಗೆ
ಕಾಸರಗೋಡು: ಸೀತಾಂಗೋ ಳಿಯ ಕಿನ್ಫ್ರಾ ಪಾರ್ಕ್‌ನ ಚಪ್ಪಲಿ ತಯಾ ರಿಸಂಸ್ಥೆಯಿಂದ 10 ಲಕ್ಷ ರೂಪಾ ಯಿಗಳ ಚಪ್ಪಲಿ ಕಳವು ಪ್ರಕರಣದಲ್ಲಿ ಆರೋಪಿಗಳು ಕೊನೆಗೂ ನಾಟಕೀಯ ರೀತಿಯಲ್ಲಿ ಕಸ್ಟಡಿಗೊಳಗಾಗಿದ್ದಾರೆ. ಆರೋಪಿಗಳಲ್ಲಿ ಓರ್ವ ಮಜಿಬೈಲು ನಿವಾಸಿ ಹಾಗೂ ಇತರ ಮೂವರು ಆತನ ಸಂಬಂಧಿಕರಾಗಿದ್ದಾರೆ. ಈ ನಾಲ್ಕು ಮಂದಿಯನ್ನು ಬದಿಯಡ್ಕ ಪೊಲೀಸರು ಕಸ್ಟಡಿಯಲ್ಲಿರಿಸಿ ತನಿಖೆಗೊಳಪಡಿಸುತ್ತಿದ್ದಾರೆ.
ಕಟ್ಟತ್ತಡ್ಕ ನಿವಾಸಿ ನಸೀರ್ ಹಾಗೂ ಗಲ್ಫ್‌ನಲ್ಲಿರುವ ಒಬ್ಬರು ಸೇರಿ ಸೀತಾಂಗೋಳಿಯಲ್ಲಿ ವೆಲ್‌ಫಿಟ್ ಎಂಬ ಚಪ್ಪಲಿ ತಯಾರಿ ಸಂಸ್ಥೆ ನಡೆಸುತ್ತಿದ್ದಾರೆ. ಈ ಸಂಸ್ಥೆಯಿಂದ ಮೇ ೨೨ರಂದು ೧೦ ಲಕ್ಷ ರೂಪಾಯಿಗಳ ಚಪ್ಪಲಿ ಕಳವಿಗೀಡಾಗಿತ್ತು. ಈ ಬಗ್ಗೆ ಅಂದು ನಸೀರ್ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಕೇಸು ದಾಖಲಿಸಿಕೊಂಡಿ ದ್ದಲ್ಲದೆ ಮುಂದೆ ತನಿಖೆಗೆ ಯಾವುದೇ ಕ್ರಮ ಉಂಟಾಗಲಿಲ್ಲ. ಇದರಿಂದ ಚಪ್ಪಲಿ ಕಳವುಗೈದವರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಇದೇ ವೇಳೆ ನಸೀರ್ ಹಾಗೂ ಅವರ ಓರ್ವಸಂಬಂಧಿಕ ನಿನ್ನೆ ಕಾಸರಗೋಡು ಪೇಟೆಗೆ ತೆರಳಿದ್ದರು. ಈ ವೇಳೆ ಅಲ್ಲಿನ ರಸ್ತೆ ಬದಿ ಚಪ್ಪಲಿ ಮಾರಾಟ ನಡೆಯುತ್ತಿರುವುದು ಕಂಡುಬಂದು ಅಲ್ಲಿಗೆ ತೆರಳಿ ನೋಡಿದಾಗ ಸೀತಾಂಗೋಳಿಯ ತಮ್ಮ ಫ್ಯಾಕ್ಟರಿಯಿಂದ ಕಳವಿಗೀಡಾದ ಚಪ್ಪಲಿಗಳು ಇದೆಂದು ಪತ್ತೆಹಚ್ಚಿದ್ದಾರೆ. ಬಳಿಕ ಚಪ್ಪಲಿ ಮಾರಾಟಗಾರನಲ್ಲಿ ಅದರ ಬೆಲೆ ಕೇಳಿದ್ದಾರೆ. ಅನಂತರ ಇದಕ್ಕಿಂತ ಹೆಚ್ಚು ಚಪ್ಪಲಿ ಇದೆಯೇ ಎಂದು ಪ್ರಶ್ನಿಸಿದಾಗ ಅವು ಬೇರೆಡೆಯಿದೆಯೆಂದು ತಿಳಿಸಿದ್ದಾನೆ. ಈ ಕುರಿತು ನಸೀರ್ ಕೂಡಲೇ ಬದಿಯಡ್ಕ ಪೊಲೀಸರಿಗೆ ಫೋನ್ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆದರೆ ಪೊಲೀಸರು ತಲುಪದ ಹಿನ್ನೆಲೆಯಲ್ಲಿ ನಸೀರ್ ನಗರಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.