ಸೀತಾಂಗೋಳಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾದ ಯುವಕ ಸೆರೆ

ಸೀತಾಂಗೋಳಿ: ಸೀತಾಂಗೋಳಿ ಪೇಟೆಯಲ್ಲಿ  ನಿನ್ನೆ ರಾತ್ರಿ ಸಂಶಯಾಸ್ಪದ ರೀತಿಯಲ್ಲಿ ಕಂಡು ಬಂದ ವ್ಯಕ್ತಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಪೆರಡಾಲ ನಿವಾಸಿ ವಿಜಯ ನಾಯ್ಕ್ (32) ಬಂಧಿತ ವ್ಯಕ್ತಿಯೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ 11 ಗಂಟೆ ವೇಳೆ ಎಸ್‌ಐ ಶ್ರೀಜೇಶ್  ನೇತೃತ್ವದ ಪೊಲೀಸರು ಗಸ್ತು ತಿರುಗುತ್ತಿದ್ದಾಗ ಅಲ್ಲಿನ ಬಿವರೇಜಸ್ ಮದ್ಯದಂಗಡಿ ಸಮೀಪದಲ್ಲಿ ಈತ ಸಂಶಯಾಸ್ಪದ ರೀತಿಯಲ್ಲಿ ಕಂಡು ಬಂದಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page