ಸುಡುಮದ್ದು ಪ್ರದರ್ಶನ ಮಧ್ಯೆ ಪಟಾಕಿ ಸಿಡಿದು ೫ ಮಂದಿಗೆ ಗಾಯ
ಕಣ್ಣೂರು: ಅಳಿಕ್ಕೋಡ್‌ನಲ್ಲಿ ಸುಡುಮದ್ದು ಪ್ರದರ್ಶನ ಮಧ್ಯೆ ಇಂದು ಮುಂಜಾನೆ 4.30 ರ ವೇಳೆ ಅಪಾಯ ಸಂಭವಿಸಿದೆ. 5 ಮಂದಿ ಗಾಯಗೊಂ ಡಿದ್ದಾರೆ. ಇಲ್ಲಿನ ನೀರ್ಕಡವು ಮೀನ್ ಕುನ್ನ್ ಮುಚ್ಚಿರಿಯನ್ ಕಾವ್‌ನಲ್ಲಿ ಭೂತಕೋಲದ ಮಧ್ಯೆ ಸುಡುಮದ್ದು ಅಪಾಯ ಸಂಭವಿಸಿದ್ದು, ಓರ್ವ ಗಂಭೀರ ಗಾಯಗೊಂಡಿದ್ದಾರೆ. ಸ್ಥಳೀಯ ಪಟಾಕಿಗಳನ್ನು ಸಿಡಿಸುತ್ತಿದ್ದ ಮಧ್ಯೆ ಸಿಡಿಯದ ಒಂದು ಪಟಾಕಿ ತುಂಬಾ ಸಮಯದ ಬಳಿಕ ಜನರ ಮಧ್ಯೆ ಸಿಡಿದು ದುರಂತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮುಂಜಾನೆ ಹೊತ್ತಾದ ಕಾರಣ ಇಲ್ಲಿ ಜನಸಂದಣಿ ಕಡಿಮೆಯಿದ್ದು, ಭಾರೀ ಅಪಾಯ ತಪ್ಪಿಹೋಗಿದೆ. ಗಂಭೀರ ಗಾಯಗೊಂಡ ಮೂರು ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ.