ಸುದೆಂಬಳ ಸಡಕ್ ರಸ್ತೆಯಲ್ಲಿ ಗುಡ್ಡೆ ಕುಸಿದು ಸಂಚಾರಕ್ಕೆ ಅಡಚಣೆ
ಬಾಯಾರು: ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಕಲ್ಲಗದ್ದೆ-ಸುದೆಂಬಳ ಸಡಕ್ ರಸ್ತೆಯ ಪೆಲ್ತಡ್ಕದಲ್ಲಿ ಗುಡ್ಡೆ ಜರಿದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ವಾಹನಗಳ ಸಂಚಾರಕ್ಕೆ ಸಮಸ್ಯೆ ಉಂಟಾಗಿ ರುವುದಾಗಿ ದೂರಲಾಗಿದೆ. ಕಳೆದ ಎರಡೂ ದಿನಗಳ ಹಿಂದೆ ಸುರಿದ ಮಳೆಗೆ ಗುಡ್ಡೆ ಜರಿದು ಬಿದ್ದಿದೆ. ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸದೆ ಇರುವುದು ಸಮಸ್ಯೆಗೆ ಕಾರಣವಾಗಿದೆ. ಈ ರಸ್ತೆಯಲ್ಲಿ ದಿನನಿತ್ಯ ಶಾಲಾ ಬಸ್ ಸಹಿತ ನೂರಾರು ವಾಹನಗಳು ಸಂಚಾರ ನಡೆಸುತ್ತಿವೆ. ಈ ಪರಿಸರದಲ್ಲಿ ಇನ್ನಷ್ಟು ಗುಡ್ಡೆ ಜರಿದು ಬೀಳುವ ಸಾಧ್ಯತೆಯಿದ್ದು ಆತಂಕ ಉಂಟಾಗಿದೆ. ಜರಿದು ಬಿದ್ದ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೂಡಲೇ ದುರಸ್ತಿ ಕ್ರಮಕೈಗೊಳ್ಳಲು ಊರವರು ಒತ್ತಾಯಿಸಿದ್ದಾರೆ.