ಸುಪರ್‌ಮಾರ್ಕೆಟ್‌ಗೆ ಬೀಗ ಜಡಿದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ತರ್ಕದ ಹಿನ್ನೆಲೆಯಲ್ಲಿ ಮಿನಿ ಸೂಪರ್ ಮಾರ್ಕೆಟ್‌ಗೆ ಬೀಗ ಜಡಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿ ಅಂಗಡಿ ಮಾಲಕ ಹಾಗೂ  ಅದನ್ನು ಖರೀದಿಸಿದ  ವ್ಯಕ್ತಿಯನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ. ಪಚ್ಚಂಬಳ ದರ್ಗಾ ಬಳಿಯಿರುವ  ಬಾತಿಷ ಮಿನಿ ಸೂಪರ್ ಮಾರ್ಕೆಟ್‌ಗೆ ಬೀಗ ಜಡಿಯಲಾಗಿದೆ. ಒಬರ್ಲೆ ನಿವಾಸಿಯ ಮಾಲಕತ್ವದಲ್ಲಿದ್ದ ಅಂಗಡಿಯನ್ನು ಇತ್ತೀಚೆಗೆ  ಪಚ್ಚಂಬಳ  ನಿವಾಸಿಗೆ ಮಾರಾಟಗೈಯ್ಯಲಾಗಿತ್ತು.  ಆದರೆ ತಿಳಿಸಿದ ದಿನದಂದು ಅದರ ಹಣ ನೀಡಿರಲಿಲ್ಲ ಎನ್ನಲಾಗಿದೆ. ಈ ಕಾರಣದಿಂದ ಅಂಗಡಿಗೆ ಸರಪ ಳಿಯಿಂದ  ಬೀಗಜಡಿದಿರುವುದಾಗಿ ಸಂಶಯಿಸಲಾಗುತ್ತಿದೆ.

You cannot copy contents of this page