ಸೆಕ್ಸ್ ರ್ಯಾಕೆಟ್: ತಲೆಮರೆಸಿಕೊಂಡ ಪೊಲೀಸರಿಗಾಗಿ ಶೋಧ
ಕಲ್ಲಿಕೋಟೆ: ಮಲಾಪರಂಬ್ ಸೆಕ್ಸ್ ರ್ಯಾಕೆಟ್ ಪ್ರಕರಣದಲ್ಲಿ ತಲೆಮರೆಸಿಕೊಂಡ ಪೊಲೀಸರ ವಿರುದ್ಧ ಲುಕೌಟ್ ಸರ್ಕ್ಯುಲರ್ ಹೊರಡಿಸಲು ತನಿಖಾ ತಂಡ ನಿರ್ಧರಿಸಿದೆ. ಕಲ್ಲಿಕೋಟೆ ಕಂಟ್ರೋಲ್ ರೂಂನ ಚಾಲಕನಾಗಿದ್ದ ಕೆ. ಶೈಜಿತ್, ಕೆ. ಸನಿತ್ ಎಂಬಿವರ ವಿರುದ್ಧ ಲುಕೌಟ್ ಸರ್ಕ್ಯುಲರ್ ಹೊರಡಿಸಲಾಗುವುದು. ಸೆಕ್ಸ್ ರ್ಯಾಕೆಟ್ ಕೇಂದ್ರ ನಡೆಸುತ್ತಿದ್ದ ಬಾಲುಶ್ಶೇರಿ ವಟ್ಟೋಳಿ ಬಜಾರ್ ನಿವಾಸಿ ಅಮನೀಶ್ ವಿರುದ್ಧವೂ ಲುಕೌಟ್ ಸರ್ಕ್ಯುಲರ್ ಹೊರಡಿಸುವ ಸಾಧ್ಯತೆ ಇದೆ. ಈ ಮೂರು ಮಂದಿಯ ಫೋನ್ಗಳು ಸ್ವಿಚ್ ಆಫ್ ಆದ ಸ್ಥಿತಿಯಲ್ಲಿದೆ