ಸ್ಕೂಟರ್ ಹೊಂಡಕ್ಕೆ ಬಿದ್ದು ಆಟೋಚಾಲಕ ಮೃತ್ಯು

ಉಪ್ಪಳ: ಸ್ಕೂಟರ್ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಹೊಂಡಕ್ಕೆ ಬಿದ್ದು ಓರ್ವ ಮೃತಪಟ್ಟು ಸಹ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಉಪ್ಪಳ ಮೂಸೋಡಿ ನಿವಾಸಿ ಸರ್ಫುದ್ದೀನ್‌ರ ಪುತ್ರ ಉಪ್ಪಳ ಗೇಟ್‌ನಲ್ಲಿ ಆಟೋರಿಕ್ಷಾ ಚಾಲಕರಾಗಿರುವ ಮೊಹಮ್ಮದ್ ಸಫ್ರಾಜ್ (೪೦) ಮೃತಪಟ್ಟರು. ಮುಸೋಡಿ ನಿವಾಸಿ ಮೊಹಮ್ಮದ್ ಮುಸ್ತಫ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ.

ಶನಿವಾರ ರಾತ್ರಿ ಇವರಿಬ್ಬರು ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದಾಗ ಮಂ ಜೇಶ್ವರ ಅಂಡರ್‌ಪಾಸ್ ಬಳಿ ಸ್ಕೂಟರ್ ನಿಯಂತ್ರಣ ತಪ್ಪಿ ಹೊಂಡಕ್ಕೆ ಬಿದ್ದಿದೆ. ಸ್ಥಳೀಯರು ಇವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತರು ತಂದೆ, ತಾಯಿ ಜುಬೈದ, ಪತ್ನಿ ಸೈನಾಜ್, ಸಹೋದರಿ ಸಫ್ರೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page