ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಮಾವೇಲಿ ಸ್ಟೋರ್ ನಿವೃತ್ತ ಮೆನೇಜರ್ ಮೃತ್ಯು: ನಾಡಿನಲ್ಲಿ ಶೋಕಸಾಗರ

ಕಾಸರಗೋಡು: ಕಾರು ಢಿಕ್ಕಿ ಹೊಡೆದು ಸ್ಕೂಟರ್ ಸವಾರನಾದ ಮಾವೇಲಿ ಸ್ಟೋರ್‌ನ ನಿವೃತ್ತ ಮೆನೇಜರ್ ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಯಾಗಿದೆ. ಉಳಿಯತ್ತಡ್ಕ ನೇಶನಲ್ ನಗರ ನಿವಾಸಿ ಎಂ. ರವಿದಾಸ್ (೫೮) ಎಂಬಿವರು ಮೊನ್ನೆ ಮಧ್ಯಾಹ್ನ ಮಧೂರು ರಸ್ತೆಯ ಸೂರ್ಲು ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಾಸರಗೋಡಿನಿಂದ ಔಷಧಿ ಖರೀದಿಸಿ ಮನೆಗೆ ಮರಳುತ್ತಿದ್ದ ರವಿದಾಸ್‌ರ ಸ್ಕೂಟರ್‌ಗೆ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತ ದಿಂದ ಗಂಭೀರ ಗಾಯಗೊಂಡ ರವಿದಾಸ್‌ರನ್ನು ಸ್ಥಳೀಯರು ಕೂಡಲೇ ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ದೀರ್ಘಕಾಲ ಸಿವಿಲ್ ಸಪ್ಲೈಸ್ ಇಲಾಖೆಯಲ್ಲಿ ನೌಕರನಾಗಿದ್ದ ರವಿದಾಸ್ ಕುಂಬಳೆ ಡಿಪ್ಪೋ ಮೆನೇಜರ್ ಆಗಿ ನಿವೃತ್ತರಾಗಿದ್ದರು. ದಿವಂಗತರಾದ ಕುಂಞಂಬು ನಾಯರ್- ದಾಕ್ಷಾಯಿಣಿ ದಂಪತಿಯ ಪುತ್ರನಾದ ಮೃತರು ಪತ್ನಿ ಇ. ಅಂಬಿಳಿ (ಮಧೂರು ಪಂಚಾಯತ್ ಭಗವತಿ ನಗರ ವಾರ್ಡ್ ಸದಸ್ಯೆ), ಪುತ್ರಿ ಮಾಲಾಖ, ಸಹೋದರ- ಸಹೋದರಿಯರಾದ ಶಾಂತ ಕುಮಾರಿ, ವೇಣು, ವತ್ಸಲ, ಪ್ರಹ್ಲಾದನ್, ಶ್ರೀನಿವಾಸನ್, ಗಣೇಶನ್, ಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page