ಸ್ವಚ್ಛತಾ ಹಿ ಸೇವಾ ಕಾರ್ಯಾಗಾರ 17ಕ್ಕೆ ಚಾಲನೆ

ಕಾಸರಗೋಡು: ಕೇಂದ್ರ ಸರಕಾರದ ಆಶ್ರಯದಲ್ಲಿ ನಡೆದು ಬರುತ್ತಿರುವ ಸ್ವಚ್ಛತಾ ಹಿ ಸೇವಾ ಕಾರ್ಯಾಗಾರಕ್ಕೆ ಜಿಲ್ಲೆಯಲ್ಲಿ ಈ ತಿಂಗಳ ೧೭ರಂದು ಚಾಲನೆ ನೀಡಲಾಗುವುದು. ತ್ಯಾಜ್ಯಮುಕ್ತ ಕೇರಳ, ನವಕೇರಳ ಕಾರ್ಯಕ್ರಮಗಳಂಗವಾಗಿ ಶುಚಿತ್ವ ಮಿಷನ್, ಕುಟುಂಬಶ್ರೀ, ಮೇರೆ ಯುವ ಭಾರತ್, ನೆಹರೂ ಯುವಕೇಂದ್ರ, ಎನ್‌ಎಸ್‌ಎಸ್, ರಾಜ್ಯ ಯುವಜನ ಕ್ಷೇಮ ಬೋರ್ಡ್, ಸ್ಕೌಟ್ ಆಂಡ್ ಗೈಡ್ಸ್, ಸಾಮಾಜಿಕ ಸಂಘಟನೆಗಳು ಎಂಬಿವುಗಳು ಜಂಟಿಯಾಗಿ ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ಶುಚೀಕರಣ ನಡೆಸಲಿವೆ. ಗ್ರಾಮೀಣ ವಲಯದ ಶುಚಿತ್ವಕ್ಕಾಗಿರುವ ತಿಳುವಳಿಕಾ ಕಾರ್ಯಕ್ರಮಗಳನ್ನು ಸಂಯೋಜಿಸುವುದು, ಚಟುವಟಿಕೆಗಳ ಮೂಲಕ ಸಂಪೂರ್ಣ ಶುಚಿತ್ವವನ್ನು ತೀವ್ರಗೊಳಿಸುವುದು ಮೊದಲಾದ ಉದ್ದೇಶದೊಂದಿಗೆ ಸ್ವಚ್ಛತಾ ಹಿ ಸೇವಾ ಕಾರ್ಯಾಗಾರ ನಡೆಯಲಿದೆ. ಗಾಂಧಿಜಯಂತಿ ದಿನವಾದ ಅಕ್ಟೋಬರ್ ೨ರವರೆಗೆ ಇದು ಮುಂದುವರಿಯಲಿದೆ.

You cannot copy contents of this page