ಸ್ವಾತಂತ್ರ್ಯ ದಿನಾಚರಣೆಗೆ ಜಿಲ್ಲೆಯಲ್ಲಿ ಸಿದ್ಧತೆ
ಕಾಸರಗೋಡು: ಆಗೊಸ್ಟ್ ೧೫ರಂದು ಸ್ವಾತಂತ್ರ್ಯ ದಿನಾಚರಣೆ ಜಿಲ್ಲೆಯಲ್ಲಿ ವಿಪುಲವಾಗಿ ಆಚರಿಸುವುದಕ್ಕಾಗಿ ಕಲೆಕ್ಟ್ರೇಟ್‌ನಲ್ಲಿ ಜರಗಿದ ಸಭೆಯಲ್ಲಿ ತೀರ್ಮಾನಿಸಲಾಯಿತು. ವಿದ್ಯಾನಗರದ ನಗರಸಭಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಪರೇಡ್ ನಡೆಯಲಿದೆ. ಸ್ವಾತಂತ್ರ್ಯ ದಿನಾಚರಣೆಯನ್ನು ಯಶಸ್ವಿಗೊಳಿಸಲು ಎಲ್ಲಾ ಸರಕಾರಿ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಬೇಕೆಂದು ಜಿಲ್ಲಾಧಿಕಾರಿ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ ಎಡಿಎಂ ಪಿ. ಅಖಿಲ್ ನುಡಿದರು. ಎಆರ್ ಕ್ಯಾಂಪ್ ನಡೆಸುವ ಸ್ವಾತಂತ್ರ್ಯ ದಿನಾಚರಣೆಯ ಅಭ್ಯಾಸ ಪರೇಡ್ ಆಗಸ್ಟ್ 11, 12ರಂದು ನಡೆಯಲಿದೆ. ಭಾಗವಹಿಸುವವರು 11, 12ರಂದು ಅಪರಾಹ್ನ 1.30ಕ್ಕೂ, 13ರಂದು ಬೆಳಿಗ್ಗೆ 7.30ಕ್ಕೂ ಸಮವಸ್ತ್ರದಲ್ಲಿ ತಲುಪಬೇಕೆಂದು ತಿಳಿಸಲಾಗಿದೆ.