ಹಜ್ ತೀರ್ಥಾಟನೆಗೆ ತೆರಳಿದ ವ್ಯಕ್ತಿ ಕುಸಿದು ಬಿದ್ದು ಸಾವು

ಕುಂಬಳೆ: ಹಜ್ ತೀರ್ಥಾಟನೆಗೆ ತೆರಳಿದ ವ್ಯಕ್ತಿ ಮಕ್ಕಾದಲ್ಲಿ ಕುಸಿದು ಬಿದ್ದು ಮೃತಪಟ್ಟರು. ಮೊಗ್ರಾಲ್ ನಿವಾಸಿಯೂ ಮಂಗಳೂರಿನಲ್ಲಿ ವಾಸಿಸುವ ಅಬ್ದುಲ್ ಸತ್ತಾರ್ ಸಾಹಿಬ್ (61) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಮಕ್ಕಾದಲ್ಲಿ ತವಾಫ್ ಬಳಿಕ ನಮಾಜು ಮಾಡುತ್ತಿದ್ದಾಗ ಕುಸಿದು ಬಿದ್ದಿದ್ದಾರೆನ್ನಲಾಗಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೇ ೧೪ರಂದು ಫರೀದ, ಸಹೋದರಿ ಆಯಿಶಾರ ಜೊತೆ ಅಬ್ದುಲ್ ಸತ್ತಾರ್ ಹಜ್ ತೀರ್ಥಾಟನೆಗೆ ತೆರಳಿದ್ದರು. ಮೃತರು ಮಕ್ಕಳಾದ ನಬೀಲ್, ನಹೀಂ, ಉಸ್ಮ, ಅಳಿಯ ಕಾಹಿನಾಥ್, ಸೊಸೆ ರಫ, ಇತರ ಸಹೋದರ- ಸಹೋದರಿಯರಾದ ಕಾದರ್ ಸಾಹಿಬ್, ಖಮರುನ್ನಿಸ, ಕೈರುನ್ನಿಸ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಪುತ್ರ ನದೀಂ ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page