ಹಲವೆಡೆ ಚಿರತೆ ಪ್ರತ್ಯಕ್ಷ
ಕಾಸರಗೋಡು: ಪುಲ್ಲೂರು ಪೆರಿಯ ಪಂಚಾಯತ್‌ನ ಅಂಬಲತ್ತರ, ಮೀಂಗೋತ್ ಸಹಿತ ವಿವಿಧೆಡೆ ಚಿರತೆ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ. ಈ ಎರಡು ಕಡೆಗಳಲ್ಲಿ ಇಂದು ಮುಂಜಾನೆ ರಬ್ಬರ್ ತೋಟದಲ್ಲಿ ಚಿರತೆ ಕಾಣಿಸಿದೆಯೆಂದು ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ತಿಳಿಸಿದ್ದಾರೆ. ಅದೇ ರೀತಿ ವಟ್ಟಂತಟ್ಟ, ಪೊಯಿನಾಚಿ ಪುಳಿನಾಕ್ಷಿ ಕಾವ್ ಸಮೀಪವೂ ಚಿರತೆ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ.