ಹಿಂದೂ ಐಕ್ಯವೇದಿ ಕುಂಬಳೆ, ಪುತ್ತಿಗೆ ಪಂಚಾಯತ್ ಸಮಿತಿ ರೂಪೀಕರಣ

ಕುಂಬಳೆ: ಹಿಂದು ಐಕ್ಯ ವೇದಿ ಮಂಜೇಶ್ವರ ತಾಲೂಕು ಸಮಿತಿ ನೇತೃತÀ್ವ ದಲ್ಲಿ ಸೀತಾಂಗೋಳಿ ಶ್ರೀದೇವಿ ಭಜನಾ ಮಂದಿರದಲ್ಲಿ ಭಾರತಮಾತೆಗೆ ಪುಷ್ಪಾರ್ಚನೆ ನಡೆಸುವ ಮೂಲಕ ಐಕ್ಯ ವೇದಿ ಕುಂಬಳೆ ಮತ್ತು ಪುತ್ತಿಗೆ ಪಂಚಾಯತ್ ನೂತನ ಸಮಿತಿ ರೂಪೀಕರಣ ಸಭೆ ತಾಲೂಕು ಅಧ್ಯಕ್ಷ ಸುರೇಶ್ ಶಾಂತಿಪಳ್ಳ ಇವರ ಅಧ್ಯ ಕ್ಷತೆಯಲ್ಲಿ ಜರಗಿತು. ಕಾಸರಗೋಡು ಜಿಲ್ಲಾಧ್ಯಕ್ಷ ಎಸ್ ಪಿ ಶಾಜಿ ಉದ್ಘಾಟಿಸಿ, ಕೇರಳದ ಹಿಂದೂ ಸಮಾಜ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಮಂ ಜೇಶ್ವರ ತಾಲೂಕಿನ ಪುರಾತನವಾದ ಹಿಂದೂ ಸ್ಥಳದ ಹೆಸರುಗ ಳನ್ನು ಬದಲಾಯಿಸಲು ನಿರಂತರ ವಾಗಿ ಶ್ರಮಿಸುತ್ತಿರುವುದು ಖಂಡನೀ ಯವಾಗಿದೆ. ಮಂಜೇಶ್ವರ ತಾಲೂಕಿನ ಹಲವು ಸಾರ್ವಜನಿಕ ರುದ್ರ ಭೂಮಿ ಗಳಲ್ಲಿ ಹಿಂದೂ ಸಮಾಜದ ವ್ಯಕ್ತಿಗಳ ಶವಸಂಸ್ಕಾರ ನಡೆಸುವು ದನ್ನು ತಡೆಯುತ್ತಿರುವ ಕಾರ್ಯವು ನಿರಂತರವಾಗಿ ನಡೆಯುತ್ತಿರುವುದು ಹಿಂದೂ ಐಕ್ಯ ವೇದಿಯ ಗಮನಕ್ಕೆ ಬಂದಿದೆ ಎಂದು ನುಡಿದರು.
ಪವಿತ್ರವಾದ ತಿರುವನಂತಪುರ ಪದ್ಮನಾಭ ಸ್ವಾಮಿಯ ಮೂಲ ಕ್ಷೇತ್ರವಾದ ಅನಂತಪುರ ಕ್ಷೇತ್ರಕ್ಕೆ ಅಪವಿತ್ರವನ್ನುಂಟು ಮಾಡುವ ಕೆಲವು ಕಾರ್ಖಾನೆಗಳು ಪರಿಸರದಲ್ಲಿ ಕಾರ್ಯವೆಸಗುತ್ತಿದ್ದು ಅವುಗಳ ವಿರುದ್ಧ ಸ್ಥಳೀಯ ನಾಗರಿಕರು ಸರಕಾರಕ್ಕೆ ಮನವಿ ನೀಡಿz್ದÀರೂ ಸರಕಾರ ಅಂತಹ ಕಾರ್ಖಾನೆಗಳ ವಿರುದ್ಧ ಯಾವುದೇ ಕಾನೂನು ಕ್ರಮಗಳನ್ನು ಕೈಗೊಂಡಿಲ್ಲ. ಭಾರತದ ಸ್ವಾತಂತ್ರ‍್ಯ ಹೋರಾಟಕ್ಕೆ ಪ್ರಚೋದನೆ ಯಾದಂತಹ ಭಾರತ ಮಾತೆಯನ್ನು ನಿರಂತರವಾಗಿ ಅವ ಮಾನಿಸುವ ಕೃತ್ಯವನ್ನು ಹಾಗೂ ಸನಾ ತನ ಸಂಸ್ಕೃತಿಯ ಆಧಾರವಾಗಿರುವ ವ್ಯಾಸ ಜಯಂತಿಯ ದಿನವಾದ ಗುರುಪೂರ್ಣಿಮೆಯ ದಿನದಂದು ವಿದ್ಯಾಲಯಗಳಲ್ಲಿ ನಡೆಯುವ ಗುರು ಪೂಜೆಯನ್ನು ಅವಮಾನಿಸುತ್ತಿರುವುದು ಈಗಿನ ಕೇರಳ ಸರಕಾರದ ಕೃತ್ಯವಾಗಿದೆ ಎಂದು ನುಡಿದರು. ಮೊಗೇರ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ರಾಮಪ್ಪ ಮಂಜೇಶ್ವರ ಮಾತನಾಡಿ ಹಿಂದೂ ಸಮಾಜ ಎಲ್ಲ ಬೇಧಗಳನ್ನು ಮರೆತು ಸಂಘಟಿತವಾಗ ಬೇಕಾಗಿರುವುದು ಸಮಾಜದ ಅವಶ್ಯಕತೆಯಾಗಿದೆ ಎಂದು ನುಡಿದರು. ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ರಾಜನ್ ಮುಳಿಯಾರು ಹಿಂದೂ ಐಕ್ಯವೇದಿ ರಾಜ್ಯ ಕಾರ್ಯಾಲಯ ವಾದ ಅಯ್ಯಂಗಾಳಿ ಭವನ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು. ಹಿಂದೂ ಐಕ್ಯವೇದಿ ಕುಂಬಳೆ ಪಂಚಾಯತ್ ಅಧ್ಯಕ್ಷೆಯಾಗಿ ಶಶಿಕಲಾ ಬಾಂಬ್ರಾಣ, ಉಪಾಧ್ಯಕ್ಷರಾಗಿ ಮಾಧವ ಗಟ್ಟಿ ಪಾಠ ಹಾಗೂ ವಿ.ಸಿ ಆಳ್ವ, ಪ್ರಧಾನ ಕಾರ್ಯದರ್ಶಿಯಾಗಿ ಆಶ್ಲೇಷ ಆಚಾರ್ಯ ಕೃಷ್ಣ ನಗರ, ಕಾರ್ಯದರ್ಶಿಯಾಗಿ ಶರತ್ ಕಾರ್ಲೆ, ವಿಘ್ನ ರಾಜ ಕಳತ್ತೂರು, ಕೋಶಾಧಿಕಾರಿಯಾಗಿ ಹರಿಪ್ರಸಾದ್ ಶಾಂತಿನಗರ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಮಲಾಕ್ಷ ಆಚಾರ್ಯ ಪೂಜೂರು, ಸಂದೀಪ ಕಾರ್ಲೆ, ಜಿತೇಂದ್ರ ನಾಯÁ್ಕಪು ಇವರನ್ನು ಆಯ್ಕೆ ಮಾಡಲಾಯಿತು. ಮಹಿಳಾ ಐಕ್ಯ ವೇದಿ ಜಿಲ್ಲಾ ಉಪಾಧ್ಯಕ್ಷೆ ಅಜಿತ ಟೀಚರ್ ಅನಂತಪುರ, ಪುತ್ತಿಗೆ ಪಂಚಾಯತ್ ಸಮಿತಿಯನ್ನು ಘೋಷಿಸಿದರು. ಗೌರವ ಅಧ್ಯಕ್ಷರಾಗಿ ಎಸ್. ನಾರಾಯಣ್ ಮುಂಡಿತಡ್ಕ, ಅಧ್ಯಕ್ಷರಾಗಿ ವೇಣುಗೋಪಾಲ ರೈ ಪುತ್ತಿಗೆ, ಉಪಾಧ್ಯಕ್ಷರಾಗಿ ಗೋಪಾಲ ಪೂಜಾರಿ ಮುಗು ರೋಡು ಹಾಗೂ ಬಿಜು ಅನಂತಪುರ, ಪ್ರಧಾನ ಕಾರ್ಯದರ್ಶಿಯಾಗಿ ಚರಣ್ ಪುತ್ತಿಗೆ, ಕಾರ್ಯದರ್ಶಿಯಾಗಿ ಅಭಿಲಾಶ್ ಅನಂತಪುರ, ಕೋಶಾಧಿಕಾರಿಯಾಗಿ ಯತೀಶ್ ಪುತ್ತಿಗೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗುರುಕಿರಣ್, ರೋಹಿತ್, ಧನುಷ್ ಇವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ನೇತಾರ ವಿ.ಕೆ ನಾಯರ್, ತಾಲೂಕು ಯುವ ವಾಹಿನಿ ಸಂಚಾಲಕ, ರೋಹಿತ್ ಮಂಡೆ ಕಾಪು ಇತರ ಪ್ರಮುಖರು ಉಪಸ್ಥಿತರಿದ್ದರು. ತಾಲೂಕು ಪ್ರಧಾನ ಕಾರ್ಯದರ್ಶಿ ಸಂದೀಪ್ ಗಟ್ಟಿ ದೇವ ನಗರ ಸ್ವಾಗತಿಸಿ, ತಾಲೂಕು ಕಾರ್ಯದರ್ಶಿ ಸ್ವಸ್ತಿಕ್ ಪುತ್ತಿಗೆ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page