ಹಿಂದೂ ಐಕ್ಯವೇದಿ ಜಿಲ್ಲಾ ಕಾರ್ಯಕರ್ತರ ಸಮಾವೇಶ
ಕಾಸರಗೋಡು: ಹಿಂದೂ ಐಕ್ಯವೇದಿ ಹಿರಿಯ ಕಾರ್ಯಕರ್ತರ ಹಾಗೂ ಈಗ ಸಂಘಟನೆಯಲ್ಲಿ ಜವಾಬ್ದಾರಿ ಹೊಂದಿರುವ ಪ್ರಮುಖ ಕಾರ್ಯಕರ್ತರ ಸಮಾವೇಶ ಕಾಞಂಗಾಡ್ ವ್ಯಾಪಾರ ಭವನದಲ್ಲಿ ನಡೆಯಿತು. ರಾಜ್ಯ ಮುಖ್ಯ ಗೌರವಾಧ್ಯಕ್ಷೆ ಶಶಿಕಲಾ ಟೀಚರ್ ಸಮಾವೇಶ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ಎಸ್.ಪಿ. ಶಾಜಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ. ಹರಿದಾಸ್, ಶೈನ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅತಿಥಿಗಳಾಗಿ ಭಾಗವಹಿಸಿದರು.
ಉದ್ಘಾಟಿಸಿ ಮಾತನಾಡಿದ ಶಶಿಕಲಾ ಟೀಚರ್ ಹಿಂದೂ ಸಮುದಾಯ ಸಂಘಟನೆಗಳಿಗಾಗಿ ತಿರುವನಂತಪುರದಲ್ಲಿ ರಾಜ್ಯ ಕಾರ್ಯಾಲಯ ನಿರ್ಮಾಣಗೊಳ್ಳ ಲಿದೆ ಎಂದು ತಿಳಿಸಿದರು. ಈ ಕಾರ್ಯಾಲ ಯದಲ್ಲಿ ತಿರುವನಂತಪುರಕ್ಕೆ ವಿವಿಧ ಅಗತ್ಯಗಳಿಗಾಗಿ ತಲುಪುವ ಹಿಂದೂ ಬಾಂಧವರಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು. ಹಿಂದೂ ಸಮಾಜಕ್ಕೆ ಸಂಬಂಧಪಟ್ಟ ಅಧ್ಯಯನ ಕೇಂದ್ರ, ಲೈಬ್ರೆರಿ ಇಲ್ಲಿ ತೆರೆಯಲಾಗುವುದು. ಇದೊಂದು ಹಿಂದೂ ಪಾರ್ಲಿಮೆಂಟ್ ಭವನವಾಗಿ ಕಾರ್ಯಾಚರಿಸಲಿದೆ ಎಂದು ಅವರು ತಿಳಿಸಿದರು. ರಾಜ್ಯಕಾರ್ಯದರ್ಶಿ ಶ್ರೀಧರನ್, ಬಿಜೆಪಿ ಮುಖಂಡರಾದ ವೇಲಾಯುಧನ್, ಶಿಬಿನ್ ತೃಕರಿಪುರ, ರಘುರಾಮ ಕಾಳ್ಯಂಗಾಡ್, ಗಣೇಶ್ ಪೆರ್ಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರ್, ಕಾರ್ಯಾಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಸುಧಾಕರನ್, ಗೋವಿಂದನ್, ರಾಮ ಸ್ವಾಮಿ ಉದಯಗಿರಿ, ಸುರೇಶ ಶಾಂತಿಪಳ್ಳ, ವಸಂತಿ ಕೃಷ್ಣ ಕುಂಬಳೆ ಉಪಸ್ಥಿತರಿದ್ದರು.