ಹಿರಿಯ ಟೈಲರ್ ನಿಧನ
ಪೈವಳಿಕೆ : ಬಳ್ಳೂರು ಚಪ್ಪರ ಮನೆ ನಿವಾಸಿ ಹಿರಿಯ ಟೈಲರ್ ಉದಯ ಆಚಾರ್ಯ (58)ನಿಧನ ಹೊಂದಿ ದರು. ಅಲ್ಪ ಕಾಲದ ಅಸೌಖ್ಯದಿಂದ ಕಾಸರಗೋಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಚಪ್ಪರಮನೆ ದಿ | ನಾರಾಯಣ ಆಚಾರ್ಯ ದಿ | ಲಕ್ಷ್ಮೀ ದಂಪತಿ ಪುತ್ರ ನಾಗಿದ್ದಾರೆ. ಮೃತರು ಪತ್ನಿ ಗಾಯತ್ರಿ. ಪುತ್ರಿ ಪೂಜಶ್ರೀ, ಸಹೋದರ ಭುವನೇಶ ಆಚಾರ್ಯ ಹೊಸಂಗಡಿ, ಸಹೋದರಿಯರಾದ ರೇವತಿ, ಜಲಜಾಕ್ಷಿ, ಚಂದ್ರಕಲಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಹೋದರರಾದ ಆನಂದ ಆಚಾರ್ಯ, ಹರಿಶ್ಚಂದ್ರ ಆಚಾರ್ಯ, ತುಕಾರಾಮ ಆಚಾರ್ಯ, ಸಹೋದರಿ ಸತ್ಯಾವತಿ ಈ ಹಿಂದೆ ನಿಧನ ರಾಗಿದ್ದಾರೆ.