ಹೊಸಂಗಡಿಯಲ್ಲಿ ಮೇ ದಿನಾಚರಣೆ

ಮಂಜೇಶ್ವರ: ಸಂಯುಕ್ತ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ಹೊಸಂಗಡಿ ಯಲ್ಲಿ ವಿಶ್ವಕಾರ್ಮಿಕರ ದಿನಾಚರಣೆ ನಿನ್ನೆ ನಡೆಸಲಾಯಿತು. ಅಂಗಡಿ ಪದವಿನಿಂದ ಹೊಸಂಗಡಿ ವರೆಗೆ ಮೆರವಣಿಗೆ ನಡೆಸಲಾಗಿದ್ದು, ಕಾರ್ಯಕ್ರಮ ವನ್ನು ಬಿಕೆಎಂ ರಾಜ್ಯ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾ ಪಿಲ್ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಕಾರ್ಮಿಕರ ಹಕ್ಕುಗಳನ್ನು ಕೇಂದ್ರ ಸರ್ಕಾರ ಕಸಿಯುತ್ತಿದೆ ಕಾರ್ಮಿಕರು ಹೋರಾಟ ದಿಂದ ಪಡೆದು ಕೊಂಡ 8 ಗಂಟೆ ಕೆಲಸ 8 ಗಂಟೆ ವಿನೋದ 8 ಗಂಟೆ ವಿಶ್ರಮ ಹಕ್ಕುಗಳನ್ನು ಇಲ್ಲದಾಗಿಸಿ 12 ಗಂಟೆ ದುಡಿಮೆ ಎಂಬ ನೀತಿಯನ್ನು ಜಾರಿಗೆ ತರಲು ಶ್ರಮಿಸುತ್ತಿದೆ. ಕಾರ್ಮಿಕರು ಮಾತ್ರವಲ್ಲದೆ ದೇಶದ ರೈತರು ಕೇಂದ್ರ ಸರ್ಕಾರದ ನೀತಿಗೆ ಎದುರಾಗಿ ಐತಿಹಾಸಿಕ ಹೋರಾಟ ನಡೆಸಿದ್ದು ದೇಶದಾದ್ಯಂತ ಸಂಚಲನ ಮೂಡಿಸಿದೆ ಎಂದು ಹೇಳಿದರು. ಸಿಐಟಿಯು ಮಂಜೇಶ್ವರ ಏರಿಯಾ ಕಾರ್ಯದರ್ಶಿ ಪ್ರಶಾಂತ್ ಕನಿಲ ಅಧ್ಯಕ್ಷತೆ ವಹಿಸಿದರು. ಸಿಐಟಿಯು ಜಿಲ್ಲಾ ಖಜಾಂಜಿ ತಂಬಾನ್ ನಾಯರ್ ಮೇ 20 ರಂದು ಸಂಯುಕ್ತ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ನಡೆಯುವ ದೇಶೀಯ ಮುಷ್ಕರ ಯಶಸ್ವಿ ಗೊಳಿಸಲು ಕರೆ ನೀಡಿದರು. ಸಿಐಟಿಯು ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ ಎಐಟಿಯುಸಿ ಮಂಜೇಶ್ವರ ಮಂಡಲ ಅಧ್ಯಕ್ಷ ರಾಮಚಂದ್ರ ಬಡಾಜೆ, ಎಐಟಿಯುಸಿ ಮೋಟಾರ್ ಯೂನಿಯನ್ ಅಧ್ಯಕ್ಷ ಮುಸ್ತಫಾ ಕಡಂಬಾರ್ ಸಿಐಟಿಯು ಮಂಜೇಶ್ವರ ಏರಿಯಾ ಅಧ್ಯಕ್ಷ ಡಿ ಕಮಲಾಕ್ಷ ಉಪಸ್ಥಿತರಿದ್ದರು. ಮಂಜೇಶ್ವರ ಮಂಡಲ ಕಾರ್ಯದರ್ಶಿ ರಾಮಕೃಷ್ಣ ಕಡಂಬಾರ್ ಸ್ವಾಗತಿಸಿದರು.

You cannot copy contents of this page