೧೦ ಕೆ.ಜಿ ಗಾಂಜಾ ವಶ: ಕಾರು ಸಹಿತ ಓರ್ವ ಸೆರೆ

ಕಾಸರಗೋಡು: ನಗರದ ತಳಂಗರೆ ಹಾರ್ಬರ್ ಬಳಿ ಕಾಸರಗೋಡು ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪಿ. ಅಜಿತ್ ಕುಮಾರ್‌ರ ನೇತೃತ್ವದ ಪೊಲೀಸರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ೧೦ಕಿಲೋ ಗಾಂಜಾ ಪತ್ತೆಹZ ಲಾಗಿದೆ. ಮಾಲನ್ನು ಕಾರೊಂ ದರಲ್ಲಿ ಸಾಗಿಸಲಾಗುತ್ತಿದ್ದು, ಅದನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದಕ್ಕೆ ಸಂಬಂಧಿಸಿ ಮುಳಿಯಾರು ಪೊವ್ವಲ್ ಬೆಂಚ್ ಕೋರ್ಟ್‌ನ ಅಬೂಬಕರ್ ಶಾನ್‌ಫರ್ ಎನ್ (೨೪) ಎಂಬಾತನನ್ನು ಬಂಧಿಸಲಾಗಿದೆ. ಮೂವರು ಸೇರಿ  ೩೦ ಕಿಲೋ ಗಾಂಜಾ ಸಾಗಿಸಲಾಗುತ್ತಿದೆ ಯೆಂಬ ಗುಪ್ತ ಮಾಹಿತಿ ತಮಗೆ ಲಭಿಸಿತ್ತು. ಅದರಂತೆ ನಡೆಸಲಾದ ಈ ಕಾರ್ಯಾಚ ರಣೆಯಲ್ಲಿ ೧೦ ಕಿಲೋ ಗಾಂಜಾ  ಮಾತ್ರವೇ ಲಭಿಸಿದೆ. ಉಳಿದ ಗಾಂಜಾವನ್ನು ಇತರ ಮೂವರು ಮೊದಲೇ ಸಾಗಿಸಿರಬಹು ದೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯನ್ನು ಬಳಿಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.

You cannot copy contents of this page