೪೪ ಗ್ರಾಂ ಎಂ.ಡಿ.ಎಂ.ಎ ಸಹಿತ ಇಬ್ಬರ ಸೆರೆ
ವಯನಾಡು: ಮಾತಂಙರ ಚೆಕ್ಪೋಸ್ಟ್ನಲ್ಲಿ ಅಬಕಾರಿ ಅಧಿ ಕಾರಿಗಳು ನಡೆಸಿದ ಕಾರ್ಯಾಚರಣೆ ಯಲ್ಲಿ ಮತ್ತೆ ೪೪ ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ಘಟನೆಗೆ ಸಂಬಂಧಿಸಿ ಕಲ್ಲಿಕೋಟೆ ಫರೋಕ್ ನಿವಾಸಿ ನಿಜಾಫತ್ (೩೦), ಮಲಪ್ಪುರಂ ಏರನಾಡ್ ನಿವಾಸಿ ಫಿರೋಸ್ (೩೦) ಎಂಬಿವರನ್ನು ಬಂಧಿಸಲಾಗಿದೆ. ಇವರು ಸಂಚರಿಸಿದ ಕಾರನ್ನು ಕಸ್ಟಡಿಗೆ ತೆಗೆಯಲಾಗಿದೆ. ಎಂಡಿಎಂಎ ಬೆಂಗಳೂರಿನಿಂದ ತಂದಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
ಬೆಂಗಳೂರಿನಿಂದ ಇದೇ ರೀತಿ ಯಲ್ಲಿ ಸಿಂಥೆಟಿಕ್ ಮಾದಕ ವಸ್ತು ಗಳು ರಾಜ್ಯದ ವಿವಿಧ ಭಾಗಗಳಿಗೆ ತಲುಪುತ್ತಿರುವುದಾಗಿ ಲಭಿಸಿದ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಬಂದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ ಪ್ಯಾಕೆಟ್ಗಳಲ್ಲಾಗಿ ತುಂಬಿಸಿರುವ ಮಾದಕವಸ್ತು ಪತ್ತೆಯಾಗಿದೆ.