೪೯.೫೦ ಲಕ್ಷ ರೂ. ಚಿನ್ನ ವಶ ಕಾಸರಗೋಡು ನಿವಾಸಿ ಕಸ್ಟಡಿಗೆ
ಕಾಸರಗೋಡು: ಕಲ್ಲಿಕೋಟೆ ಕರಿಪ್ಪೂರ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ವಿಮಾನದಲ್ಲಿ ಗಲ್ಫ್ನಿಂದ ಬಂದಿಳಿದ ಕಾಸರಗೋಡು ನಿವಾಸಿಯಿಂದ ೪೯.೫೦ ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ಕಾಸರಗೋಡಿನ ಅಬ್ದುಲ್ ಜಲೀಲ್ ಎಂಬಾತನನ್ನು ಕಸ್ಟಮ್ಸ್ ತಂಡ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದೆ.