ಅಧ್ಯಾಪಕರು, ನೌಕರರಿಂದ ಮಂಜೇಶ್ವರ ತಾಲೂಕು ಕಚೇರಿ ಮುಂಭಾಗ ಧರಣಿ

ಮಂಜೇಶ್ವರ: ಕೇಂದ್ರ ಸರಕಾರ ಕಡಿತಗೊಳಿಸಿದ, ಕೇರಳಕ್ಕೆ ಲಭಿಸ ಬೇಕಾದ ಆರ್ಥಿಕ ಪಾಲು ಮಂ ಜೂರು ಮಾಡಬೇಕು. ಪಿಎಫ್‌ಆರ್‌ಡಿಎ ಕಾನೂನು ಹಿಂತೆಗೆಯಬೇಕು. ಪಾಲುದಾರಿಕೆ ಪಿಂಚಣಿ ವ್ಯವಸ್ಥೆ ಉಪೇಕ್ಷಿಸಬೇಕು, ಬಾಕಿ ಉಳಿಸಿದ ಕ್ಷಾಮಭತ್ತೆ ಕೂಡಲೇ ಮಂಜೂರು ಮಾಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಕೌನ್ಸಿಲ್ ಆಫ್ ಸ್ಟೇಟ್ ಎಂಪ್ಲೋಯೀಸ್ ಆಂಡ್ ಟೀಚರ್ಸ್‌ನ ಆಶ್ರಯದಲ್ಲಿ ಮಂಜೇಶ್ವರ ತಾಲೂಕು ಕಚೇರಿ ಮುಂಭಾಗ ಅಧ್ಯಾಪಕರು, ನೌಕರರು ಸಾಮೂಹಿಕ ಧರಣಿ ನಡೆಸಿದರು. ಎನ್‌ಜಿಒ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಭಾನು ಪ್ರಕಾಶ್ ಉದ್ಘಾಟಿಸಿದರು. ಜೋಸ್ ಎಂ.ಎಸ್. ಅಧ್ಯಕ್ಷತೆ ವಹಿಸಿದರು. ಶ್ಯಾಮ್ ಭಟ್ ಸ್ವಾಗತಿಸಿದರು. ಸುರೇಂದ್ರನ್ ಎಂ. ಮಾತ ನಾಡಿದರು. ಕೃಷ್ಣನ್ ಎಂ. ವಂದಿಸಿದರು.

RELATED NEWS

You cannot copy contents of this page