ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಸಿಪಿಎಂ ನೇತಾರ ನಿಧನ

ಕುಂಬಳೆ: ಅಸೌಖ್ಯ ಬಾಧಿಸಿ  ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸಿಪಿಎಂ ನೇತಾರ ಮೃತಪಟ್ಟರು.

ಕುಂಬಳೆ ಮಾವಿನಕಟ್ಟೆ ನಿವಾಸಿ ಕೃಷ್ಣ ಚೆಟ್ಟಿಯಾರ್ (38) ಎಂಬವರು ಮೃತಪಟ್ಟ ವ್ಯಕ್ತಿ. ಇವರು ಸಿಪಿಎಂ ಲೋಕಲ್ ಕಮಿಟಿ ಸದಸ್ಯನೂ,  ಕುಂಬಳೆ ಅಗ್ರಿಕಲ್ಚರಲ್ ವೆಲ್ಫೇರ್ ಕೋ-ಆಪರೇಟಿವ್ ಸೊಸೈಟಿಯ ಮಾಜಿ ಅಧ್ಯಕ್ಷರೂ ಆಗಿದ್ದಾರೆ.

ಕೆಲವು ದಿನಗಳ ಹಿಂದೆ ಇವರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಹೃದಯ ಸಂಬಂಧ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬಳಿಕ ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ  ದಾಖಲಿಸಲಾಗಿತ್ತು. ನಿನ್ನೆ ಸಂಜೆ ಅಲ್ಲಿಂದ ಬಿಡುಗಡೆಗೊಳಿಸಿ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿ   ದಾಖಲಿಸಲಾಗಿತ್ತು. ಆದರ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನಸಂಭವಿಸಿದೆ.

ಮೃತರು ಪತ್ನಿ ಲಕ್ಷ್ಮಿ, ಮಕ್ಕಳಾದ ಸುರೇಶ್, ರಾಜೇಶ್, ಸೊಸೆಯಂದಿರಾದ ವೇಣಿ, ರಂಜಿನಿ, ಮೀನ, ಸಹೋದರಿಯರಾದ ಮೀನಾಕ್ಷಿ, ಲೀಲಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಮಗ ಮೃತಪಟ್ಟು 9ನೇ ದಿನ ತಂದೆ ಸಾವು: ಶೋಕಸಾಗರ

ಕುಂಬಳೆ: ಇಂದು ಬೆಳಿಗ್ಗೆ ಮೃತಪಟ್ಟ ಕುಂಬಳೆ ಮಾವಿನಕಟ್ಟೆಯ ಕೃಷ್ಣ ಚೆಟ್ಟಿಯಾರ್‌ರ ಪುತ್ರ ದಿನೇಶ್ (48) ಎಂಬವರು ಈ ತಿಂಗಳ ೧೫ರಂದು ಮನೆಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಂದು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ  ಕೃಷ್ಣ ಚೆಟ್ಟಿಯಾರ್‌ರನ್ನು ಕಾಣಲು ಮನೆಯವರು ತೆರಳಿದ್ದರು. ಈ ವೇಳೆ ಪುತ್ರ ದಿನೇಶ್ ಮಾತ್ರವೇ ಮನೆಯಲ್ಲಿದ್ದರು. ಅಂದು ಸಂಜೆ ಓರ್ವ ಸಹೋದರ ಮನೆಗೆ  ತಲುಪಿ ನೋಡಿದಾಗ ದಿನೇಶ್ ಮನೆಯೊಳಗೆ ಬಿದ್ದು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದರು. ಈ ಹಿನ್ನೆಲೆಯಲ್ಲಿ ಕೃಷ್ಣ ಚೆಟ್ಟಿಯಾರ್‌ರನ್ನು ಮನೆಗೆ ಕರೆತರಲಾಗಿತ್ತು. ದಿನೇಶ್‌ರ ಅಂತ್ಯಸಂಸ್ಕಾರ ಬಳಿಕ ಕೃಷ್ಣ ಚೆಟ್ಟಿಯಾರ್‌ರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.  ಇದೀಗ ಪುತ್ರನ ಬೆನ್ನಲ್ಲೇ ತಂದೆಯೂ ನಿಧನಹೊಂದಿರುವುದು ಶೋಕಸಾಗರ ಸೃಷ್ಟಿಸಿದೆ.

RELATED NEWS

You cannot copy contents of this page