ಗುಪ್ತಾಂಗದಲ್ಲಿ ಅಡಗಿಸಿ ಸಾಗಿಸಿದ ಎಂಡಿಎಂಎ ಸಹಿತ ಯುವತಿ, ಗೆಳೆಯ ಸೆರೆ

ಕೊಚ್ಚಿ: ಗುಪ್ತಾಂಗದಲ್ಲಿ ಅಡಗಿಸಿ ಸಾಗಿಸುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಎಂಡಿಎಂಎ ಸಹಿತ ಯುವತಿ ಹಾಗೂ ಗೆಳೆಯನನ್ನು ಅಬಕಾರಿ ತಂಡ ಬಂಧಿಸಿದೆ. ಆಲಪ್ಪುಳ ತೃಕುನ್ನಪ್ಪುಳ ಕೋಟೆಮುರಿ ಪಾಂಡಿಗ ಶಾಲೆ ನಿವಾಸಿ ಮುಹಮ್ಮದ್ ಶಾಫಿ (29), ಆಲಪ್ಪುಳ ನಿವಾಸಿ ಸರಿತ (30) ಎಂಬಿವರನ್ನು ಬಂಧಿಸಲಾಗಿದೆ. ಇವರಿಂದ 94.032 ಗ್ರಾಂ ಎಂಡಿಎಂಎಯನ್ನು ಅಬಕಾರಿ ತಂಡ ವಶಪಡಿಸಿದೆ. ಬೆಂಗಳೂರಿನಿಂದ ಎಂಡಿಎಂಎ ಎರ್ನಾಕುಳಂಗೆ ಹಾಗೂ ಆಲಪ್ಪುಳಕ್ಕೆ ತಲುಪಿಸಿ ವಸತಿಗೃಹಗಳನ್ನು ಕೇಂದ್ರೀಕರಿಸಿ ಇವರು ಮಾದಕ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದರೆಂದು ಅಬಕಾರಿ ತಂಡ ತಿಳಿಸಿದೆ.

ಎರ್ನಾಕುಳಂ ಸೌತ್‌ನ ಲಾಡ್ಜ್ ಒಂದರಿಂದ 65.27 ಗ್ರಾಂ ಎಂಡಿಎಂಎ ಸಹಿತ ಮುಹಮ್ಮದ್ ಶಾಫಿಯನ್ನು ಎಕ್ಸೈಸ್ ಸೆರೆ ಹಿಡಿದಿದೆ. ದೀರ್ಘ ಕಾಲದಿಂದ ಎಂಡಿಎಂಎ ವ್ಯಾಪಾರಿಗಳಾದ ಇವರ ಮೇಲೆ ಎಕ್ಸೈಸ್ ನಿಗಾ ಇರಿಸಿತ್ತು. ಇತ್ತೀಚೆಗೆ ಬೆಂಗಳೂರಿನಿಂದ ಮಾದಕ ಪದಾರ್ಥ ಸಹಿತ ಬಸ್‌ನಲ್ಲಿ ಆಲಪ್ಪುಳಕ್ಕೆ ಬರುತ್ತಿದ್ದ ಇವರನ್ನು ಎಕ್ಸೈಸ್ ತಂಡ ಪರಿಶೀಲಿಸಿತ್ತು. ಆಗ ಶಾಫಿ ತನ್ನ ಕೈವಶದಲ್ಲಿದ್ದ ಎಂಡಿಎಂಎಯನ್ನು ಎಸೆದಿದ್ದನು.  ಸರಿತ ಎಂಡಿಎಂಎಯನ್ನು ತನ್ನ ಗುಪ್ತಾಂಗದಲ್ಲಿರಿಸಿಕೊಂಡಿದ್ದಳು. ಅಂದಿನ ತಪಾಸಣೆಯಲ್ಲಿ ಆಕೆ ಪಾರಾಗಿದ್ದಳು. ಅದರ ಬಳಿಕ ಎಂಡಿಎಂಎ ಸಾಗಾಟಕ್ಕೆ ಸರಿತ ಇದೇ ರೀತಿಯನ್ನು ಉಪಯೋಗಿಸಿದ್ದಳು.

ಎರ್ನಾಕುಳಂನ ವಸತಿಗೃಹದಲ್ಲಿ ಎಂಡಿಎಂಎ ಸಹಿತ ಮುಹಮ್ಮದ್ ಶಾಫಿ ಸೆರೆಗೀಡಾದ ಸಮಯದಲ್ಲಿ ಸರಿತ ಆಲಪ್ಪುಳದಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದಳೆನ್ನಲಾಗಿದೆ. ಶಾಫಿ ಸೆರೆಯಾದ ಮಾಹಿತಿ ತಿಳಿಯದೆ ಎರ್ನಾಕುಳಂಗೆ ಹಿಂತಿರುಗಿದ ಸರಿತಳನ್ನು ರಾತ್ರಿ ವೇಳೆ ಎಕ್ಸೈಸ್ ತಂಡ ಸೆರೆ ಹಿಡಿದಿದೆ. ಈಕೆಯನ್ನು ವಿಚಾರಣೆಗೊಳ ಪಡಿಸಿದ ವೇಳೆ ಆಲಪ್ಪುಳದ ಮನೆಯೊಂ ದರಿಂದ 28.76 ಗ್ರಾಂ ಎಂಡಿಎಂಎ ಅಬಕಾರಿ ತಂಡ ವಶಪಡಿಸಿದೆ. ಈ ಹಿನ್ನೆಲೆಯಲ್ಲಿ ಇವರಿಂದ ಒಟ್ಟು 94.032 ಗ್ರಾಂ ಎಂಡಿಎಂಎ ಹಾಗೂ ಒಂದು ಮೊಬೈಲ್, 17,700 ರೂ. ಅಧಿಕಾರಿಗಳು ವಶಪಡಿಸಿದ್ದಾರೆ.

RELATED NEWS

You cannot copy contents of this page