ನೆಲ್ಲಿಕುಂಜೆಯಲ್ಲಿ ಗಲ್ಫ್ ಉದ್ಯೋಗಿ ಮನೆಯಿಂದ ಕಳವು: ತನಿಖೆ ಆರಂಭ

ಕಾಸರಗೋಡು:  ನೆಲ್ಲಿಕುಂಜೆ ಯಲ್ಲಿ  ಗಲ್ಫ್ ಉದ್ಯೋಗಿಯ ಮನೆಯಿಂದ ಚಿನ್ನಾಭರಣ ಹಾಗೂ ವಿವಿಧ ಉಪಕರಣಗಳು ಕಳವಿಗೀ ಡಾದ ಪ್ರಕರಣದಲ್ಲಿ  ಕಾಸರಗೋಡು ನಗರಠಾಣೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ನೆಲ್ಲಿಕುಂಜೆ ಲೈಟ್ ಹೌಸ್ ಬಳಿಯ  ಮೋಹನನ್ ಎಂಬವರ ಮನೆಯಿಂದ ಕಳವು ನಡೆದಿದೆ. ಮನೆಯ ಕಪಾಟಿನಲ್ಲಿದ್ದ ಒಂದೂವರೆ ಪವನ್‌ನ ಚಿನ್ನದ ಬಳೆ, ಐಫೋನ್‌ನ ಚಾರ್ಜರ್, ಈಯರ್ ಡ್ರೋಪ್, ಹೆಡ್‌ಸೆಟ್, ಲ್ಯಾಪ್ ಟಾಪ್‌ನ ಎರಡು ಬ್ಯಾಗ್‌ಗಳು ಕಳವಿ ಗೀಡಾಗಿರುವುದಾಗಿ ದೂರಲಾಗಿದೆ.

ಮೋಹನನ್ ಹಾಗೂ ಕುಟುಂಬ ಗಲ್ಫ್‌ನಲ್ಲಿದ್ದಾರ. ಮೋಹನ ನ್‌ರ ಪತ್ನಿಯ ತಾಯಿ ಮುಲ್ಲ ಮನೆಯನ್ನು  ನೋಡಿಕೊಳ್ಳುತ್ತಿದ್ದರು. ಮೊನ್ನೆ ಇವರು ಮನೆಗೆ ತಲುಪಿ ನೋಡಿದಾಗ ಬಾಗಿಲು ಮುರಿದ ಸ್ಥಿತಿಯಲ್ಲಿ ಕಂಡುಬಂದಿದೆ.  ಬಳಿಕ ಒಳಗೆ ಪರಿಶೀ ಲಿಸಿದಾಗ ಕಳವು ನಡೆದಿರುವುದು ಅರಿವಿಗೆ ಬಂದಿದೆ. ಈ ಬಗ್ಗೆ ಮುಲ್ಲ ನೀಡಿದ ದೂರಿನಂತೆ ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page