ಭಾರೀ ಪ್ರಮಾಣದ ವಾಶ್ ವಶ

ಕಾಸರಗೋಡು: ಕಾಸರಗೋಡು ಮುಟ್ಟತ್ತೋಡಿ ಊಜಂಗೋಡಿನ ವ್ಯಕ್ತಿಯೋರ್ವರ ಹಿತ್ತಿಲ ಪೊದೆಯಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಸಲು ಸಿದ್ಧಪಡಿಸಲಾಗಿದ್ದ 800 ಲೀಟರ್ ವಾಶ್ (ಹುಳಿರಸ)ವನ್ನು ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರ ಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಎಕ್ಸೈಸ್ ಇಂಟೆಲಿಜೆನ್ಸ್ ಇನ್‌ವೆಸ್ಟಿಗೇಶನ್ ಬ್ಯೂರೋದ ಎಕ್ಸೈಸ್ ಇನ್‌ಸ್ಪೆಕ್ಟರ್ ಪ್ರಮೋದ್ ರಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಕಾಸರಗೋಡು ರೇಂಜ್ ಎಕ್ಸೈಸ್ ಇನ್‌ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ತಂಡ ನಿನ್ನೆ ಈ ಕಾರ್ಯಾಚರಣೆ ನಡೆಸಿದೆ.  ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ  ಐಬಿ ಇನ್‌ಸ್ಪೆಕ್ಟರ್ ಪ್ರಮೋದ್, ಎಇಐ ಗಳಾದ ಬಿಜೋಯ್, ಶ್ರೀನಿವಾಸನ್, ಸುರೇಶನ್ ಮತ್ತು ಸಿಇಒಗಳಾದ ಶಾಂಜಿತ್, ಕಣ್ಣನ್ ಕುಂಞಿ, ಸಂಶುದ್ದೀನ್ ಮತ್ತು ಎಇಐ ರಾಜೀವನ್ ಎಂಬಿವರು ಒಳಗೊಂಡಿದ್ದರು.

RELATED NEWS

You cannot copy contents of this page