ಹೊಸದುರ್ಗ: ಮನೆಯಿಂದ ಹೊರಹೋದ ಯುವತಿ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ವಲಿಯಪರಂಬ ಮಾವಿಲಕಡಪ್ಪುರಂ ನಿವಾಸಿಯಾದ 19ರ ಹರೆಯದ ಯುವತಿ ನಾಪತ್ತೆಯಾದವಳು. ಶನಿವಾರ ಮುಂಜಾನೆ 3 ಗಂಟೆಗೆ ಮನೆಯಿಂದ ಹೊರಹೋಗಿದ್ದು, ಆ ಬಳಿಕ ಹಿಂತಿರುಗಿಲ್ಲವೆಂದು ತಂದೆ ಚಂದೇರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುವತಿ ರಿಸ್ವಾನ್ ಎಂಬಾತನ ಜೊತೆಗೆ ತೆರಳಿರುವುದಾಗಿ ಶಂಕಿಸುತ್ತಿರುವುದಾಗಿ ತಂದೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.






