ಮಧೂರು ದೇವಸ್ಥಾನದ ವೆಬ್‌ಸೈಟ್ ಲೋಕಾರ್ಪಣೆ

ಮಧೂರು: ಇಲ್ಲಿನ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದ ವೆಬ್‌ಸೈಟ್‌ನ್ನು ಉದ್ಯಮಿ ಮಹಾಬಲೇಶ್ವರ ಭಟ್ ಎಡಕ್ಕಾನ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಲೋಕಾರ್ಪಣೆ ನಡೆಸಿದರು.  ಕ್ಷೇತ್ರದ ಪ್ರಧಾನ ಅರ್ಚಕ ಶ್ರೀಕೃಷ್ಣ ಉಪಾಧ್ಯಾಯ ಪ್ರಾರ್ಥನೆ ಹಾಡಿದರು. ಈ ವೇಳೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಬಿ.ಎಸ್. ರಾವ್, ಕಾರ್ಯಾಧ್ಯಕ್ಷ ಮಂಜುನಾಥ ಕಾಮತ್, ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಸುರೇಶ್, ರಾಜೇಶ್, ಜಾಲತಾಣ ವಿನ್ಯಾಸಕ ರವಿನಾರಾಯಣ ಗುಣಾಜೆ ಸಹಿತ ಹಲವರು ಉಪಸ್ಥಿತರಿದ್ದರು. www.madhurtemple.in ವೆಬ್‌ಸೈಟ್ ಲಿಂಕ್ ಆಗಿದೆ.

You cannot copy contents of this page