ವಾಹನ ಅಪಘಾತದಲ್ಲಿ ಯುವಕ ಮೃತ್ಯು: ತಂದೆಗೆ ಗಂಭೀರ ಗಾಯ

ಕುಂಬಳೆ: ಪೆರ್ಮುದೆ -ಬಂದ್ಯೋಡು ರಸ್ತೆಯ ಪೆರ್ಮುದೆ ಪೆರಿಯಡ್ಕದಲ್ಲಿ ನಿನ್ನೆ ಬೆಳಿಗ್ಗೆ ಸಂಭವಿಸಿದ ವಾಹನ ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಚಿಪ್ಪಾರು ಬಾಯಾರು ನೇತ್ರಗುಳಿ ನಿವಾಸಿ ಎನ್. ಕಿಶನ್ (25) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಿಶನ್ ಚಲಾಯಿಸುತ್ತಿದ್ದ ಸ್ಕೂಟರ್ ಹಾಗೂ ಎದುರಿನಿಂದ ಬಂದ ಬೈಕ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಈ ವೇಳೆ ಕಿಶನ್‌ರ ಜತೆಗೆ ಇದ್ದ ತಂದೆ ಮಾಧವ ದೇವಾಡಿಗ (55) ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಿಶನ್ ವೆಲ್ಡಿಂಗ್ ಕಾರ್ಮಿಕನಾಗಿ ಕೆಲಸ ನಿರ್ವಹಿ ಸುತ್ತಿದ್ದರು.

ಮೃತರು ತಂದೆ, ತಾಯಿ ಹರಿಣಿ, ಸಹೋದರ ಮೋಹನ್‌ದಾಸ್, ಸಹೋದರಿ ಶರ್ಮಿಳ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.  ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ನಿನ್ನೆ ರಾತ್ರಿ ಮನೆಗೆ ತಲುಪಿಸಿ ಅಂತ್ಯ ಸಂಸ್ಕಾರ ನಡೆಸಲಾಯಿತು.

RELATED NEWS

You cannot copy contents of this page