ಮನೆಯಲ್ಲಿ ಬಚ್ಚಿಟ್ಟಿದ್ದ 4 ಕಿಲೋ ಗಾಂಜಾ ಪತ್ತೆ: ಓರ್ವ ಸೆರೆ
ಕಾಸರಗೋಡು: ಕಾಸರಗೋಡು ಪೊಲೀಸರು ನಿನ್ನೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮನೆಯೊಂ ದರಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ 4.050 ಗ್ರಾಂ ಗಾಂಜಾ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಕಾಸರಗೋಡು ತಳಂಗರೆ ಕೆಕೆಪುರದ ಸವಾದ್ ಕೆ (39) ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ ವಾಸಿಸುತ್ತಿರುವ ತಳಂ ಗರೆ ಕೆ.ಕೆ.ಪುರದಲ್ಲಿರುವ ಕ್ವಾರ್ಟರ್ಸ್ಗೆ ಪೊಲೀಸರು ದಾಳಿ ನಡೆಸಿ ಅಲ್ಲಿಂದ ಗಾಂಜಾ ಪತ್ತೆಹಚ್ಚಿದ್ದಾರೆ. ಗಾಂಜಾ ವನ್ನು ಆ ಕ್ವಾರ್ಟರ್ಸ್ನ ಕೊಠಡಿ ಯೊಳಗಿನ ಕಪಾಟಿನಲ್ಲಿ ಬಚ್ಚಿಡಲಾ ಗಿತ್ತು. ಮಾರಾ ಟಕ್ಕಾಗಿ ಅದನ್ನು ಆರೋಪಿ ತಂದಿದಾ ನೆಂದು ಪೊಲೀಸರು ತಿಳಿಸಿದ್ದಾರೆ. ಮಾತ್ರವಲ್ಲ ದಂಧೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಇನ್ನೊಂದೆಡೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.