ಯಕ್ಷಧ್ರುವ ಪಟ್ಲ ಫೌಂಡೇಶನ್ ಉಪ್ಪಳ ಘಟಕ ಅಧ್ಯಕ್ಷರಾಗಿ ಚಂದ್ರಹಾಸ ಶೆಟ್ಟಿ ಆಯ್ಕೆ

ಉಪ್ಪಳ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಉಪ್ಪಳ ಘಟಕದ ನೂತನ ಅಧ್ಯಕ್ಷರಾಗಿ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ ಅವರನ್ನು ಆರಿಸಲಾಗಿದೆ. ಇತ್ತೀಚೆಗೆ ಶ್ರೀಹರಿ ಭಜನಾ ಸಂಘ ಕುಳೂರು ಸಂಘದ ವಠಾರದಲ್ಲಿ ಉಪ್ಪಳ ಘಟಕದ ಸದಸ್ಯರ ಸಭೆ ಜರಗಿತು. ಉಪ್ಪಳ ಘಟಕದ ಗೌರವಾಧ್ಯಕ್ಷ ಪಿ.ಆರ್. ಶೆಟ್ಟಿ ಪೊಯ್ಯೆಲು ಕುಳೂರು ಅಧ್ಯಕ್ಷತೆ ವಹಿಸಿದ್ದರು.  ಕೊಂಡೆವೂರು ಮಠಾಧೀಶ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗೆ ಗೌರವ ಮಾರ್ಗದರ್ಶಕರಾಗಿರುವ ಸಮಿತಿಯಲ್ಲಿ ಮುಂದಿನ ಸಾಲಿಗೆ ಉಪ್ಪಳ ಘಟಕದ ಗೌರವಾಧ್ಯಕ್ಷರಾಗಿ ಪಿ.ಆರ್. ಶೆಟ್ಟಿ ಪೊಯ್ಯೆಲು, ಕುಳೂರು, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಶೆಟ್ಟಿ ಕಲ್ಲಾಯಿ, ಸಂಚಾಲಕರಾಗಿ ಯೋಗೀಶ ರಾನ್‌ಚಿ ಗುರುಪಾದೆ, ಕೋಶಾಧಿಕಾರಿಯಾಗಿ ಶಶಿಧರ ಪೂಂಜ ಕೊಂಡೆವೂರು ಹಾಗೂ ಇತರ ಪದಾಧಿಕಾರಿಗಳನ್ನು ಆರಿಸಲಾಯಿತು.

RELATED NEWS

You cannot copy contents of this page