ಸಿಪಿಎಂ ಕಾರ್ಯಕರ್ತ ನಿಧನ

ಉಪ್ಪಳ: ಮಂಗಲ್ಪಾಡಿ ಬೇರಿಕೆ ನಿವಾಸಿ  ಸಿಪಿಎಂ ನೇತಾರ ದಿ| ನಾರಾಯಣರ ಪುತ್ರ  ಸಿಪಿಎಂ ಕಾರ್ಯಕರ್ತ ಶೇಷಾದ್ರಿ (47)  ನಿಧನರಾದರು. ಲಿವರ್ ಸಂಬಂಧ ಅಸೌಖ್ಯದಿಂದ ಬಳಲುತ್ತಿದ್ದರು.  ಅವಿವಾಹಿತರಾಗಿದ್ದರು. ಮೃತರು ತಾಯಿ ಕಮಲ, ಸಹೋದರಿಯರಾದ ಶೈಲಜ, ಸೋನಿಯಾ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಸಹೋದರಿ ಸುಮಿತ ಈ ಹಿಂದೆ ನಿಧನರಾಗಿದ್ದಾರೆ.

ಮೃತರ ಮನೆಗೆ ಶಾಸಕ ಸಿ.ಎಚ್ ಕುಂಞಂಬು, ಮಾಜಿ ಶಾಸಕ ಸತೀಶ್ಚಂದ್ರನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಹಿತ ಹಲವಾರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

RELATED NEWS

You cannot copy contents of this page