ಹಾಲು, ಪತ್ರಿಕೆ ತರಲೆಂದು ಹೋದ ವ್ಯಕ್ತಿ ಕೆರೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು:  ಹಾಲು ಮತ್ತು ಪತ್ರಿಕೆ ತರಲೆಂದು ಮನೆಯಿಂದ ಹೊರಗೆ ಹೋದ ವ್ಯಕ್ತಿ ಕೆರೆಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಕಾಸರಗೋಡು ಕರಂದಕ್ಕಾಡು ಅಗ್ನಿಶಾಮಕದಳ ಕಚೇರಿ ಬಳಿಯ ನಿವಾಸಿ ಸುರೇಶ್ ಕಾಮತ್ (62) ಸಾವನ್ನಪ್ಪಿದ ವ್ಯಕ್ತಿ. ಇವರು ನಿನ್ನೆ ಬೆಳಿಗ್ಗೆ  ಹಾಲು ಮತ್ತು ಪತ್ರಿಕೆ ತರಲೆಂದು ಮನೆಯಿಂದ ಹೊರ ಹೋಗಿದ್ದರು. ನಂತರ ತಡವಾದರೂ ಅವರು ಮನೆಗೆ ಹಿಂತಿರುಗಲಿಲ್ಲ. ಈ ಹಿನ್ನೆಲೆಯಲ್ಲಿ ನಡೆಸಿದ ಶೋಧ ವೇಳೆ ಕರಂದಕ್ಕಾಡ್ ಸರಕಾರಿ ಬೀಜೋತ್ಪಾದನಾ ಕೇಂದ್ರದ ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕದಳ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಕರೆಯಿಂದ ಮೇಲಕ್ಕೆತ್ತಿ ಜನರಲ್ ಆಸ್ಪತ್ರೆಗೆ ಸಾಗಿಸಿದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಸಂಸ್ಕರಿ ಸಲಾಯಿತು. ಸಾವಿಗೆ ಕಾರಣ ಇನ್ನೂ ಸ್ಪಷ್ಟಗೊಂಡಿಲ್ಲ.

ಮೃತರು ಪತ್ನಿ ಪೂರ್ಣಿಮಾ ಕಾಮತ್, ಮಕ್ಕಳಾದ ವಿಕ್ರಂ ಕಾಮತ್, ಅನಂತ ಕಾಮತ್, ಸೊಸೆ ಅಮೃತ, ಸಹೋದರ-ಸಹೋದ ರಿಯರಾದ ರಮೇಶ ಕಾಮತ್, ರಾಜಾರಾಮ್ ಕಾಮತ್, ಹೇಮಲತಾ ಪೈ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page