ಅಂತಾರಾಜ್ಯ ಕಳವು ಪ್ರಕರಣದ ಆರೋಪಿ ಮಂಜೇಶ್ವರದಲ್ಲಿ ಸೆರೆ

ಉಪ್ಪಳ: ಅಂತಾರಾಜ್ಯ ಕಳವು ಪ್ರಕರಣದ ಆರೋಪಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಮಚ್ಚಂಪಾಡಿ ನಿವಾಸಿಯೂ ಪ್ರಸ್ತುತ ಕರ್ನಾಟಕದ ಉಪ್ಪಿನಂಗಡಿಯಲ್ಲಿ ವಾಸಿಸುವ ಮೊಹಮ್ಮದ್ ಹನೀಫ್ ಯಾನೆ ಗೋಳಿ ಹನೀಫ್ (34) ಎಂ ಬಾತನನ್ನು  ಮಂಜೇಶ್ವರ ಇನ್‌ಸ್ಪೆಕ್ಟರ್ ಟೋಲ್ಸನ್ ಜೋಸೆಫ್ ಹಾಗೂ ಎಸ್‌ಐ ನಿಖಿಲ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ನಿನ್ನೆ ರಾತ್ರಿ ಇವರು ಗಸ್ತು ತಿರುಗುತ್ತಿದ್ದ ವೇಳೆ  ಮೊಹಮ್ಮದ್ ಹನೀಫ್ ಸಂಶಯಾಸ್ಪದ ರೀತಿಯಲ್ಲಿ ಕಂಡು ಬಂದಿದ್ದಾನೆ. ಇದರಿಂದ ಈತನನ್ನು ಕಸ್ಟಡಿಗೆ ತೆಗೆದು ಠಾಣೆಗೆ ತಲುಪಿಸಿ ತನಿಖೆ ಗೊಳಪಡಿಸಿದಾಗ ಮನೆ ಕಳವು ಪ್ರಕ ರಣದ ಆರೋಪಿಯೆಂದು ತಿಳಿದುಬಂ ದಿದೆ. ಕಳೆದ ಜುಲೈ 12ರಂದು ಸುಂಕದ ಕಟ್ಟೆ ನಚ್ಚಿಲಪದವಿನಲ್ಲಿ ಬೀಗ ಜಡಿದ ಮನೆಗೆ ನುಗ್ಗಿದ ಆರೋಪಿ ಟ್ಯಾಬ್, ಸ್ಪಿಂಕ್ಲರ್ ಮೊದಲಾದ ಸಾಮಗ್ರಿ ಗಳನ್ನು ಕಳವು ನಡೆಸಿದ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದಾನೆ.  ಈತನ ವಿರುದ್ಧ ಕರ್ನಾಟಕದ ವಿವಿಧೆಡೆ ಕಳವು ಪ್ರಕರಣಗಳಿ ವೆಯೆಂದು ತನಿಖೆಯಲ್ಲಿ ತಿಳಿದುಬಂದಿರು ವುದಾಗಿ ಪೊಲೀಸರು ತಿಳಿಸಿದ್ದಾರೆ. 

RELATED NEWS

You cannot copy contents of this page