ಅಡ್ಕಸ್ಥಳ ಬಳಿ ವಾಹನ ಅಪಘಾತ ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ಪೆರ್ಲ: ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂ ರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕಾಟುಕುಕ್ಕೆ ಬಳಿಯ  ಯುವಕ ಮೃತಪಟ್ಟರು.

ಕಾಟುಕುಕ್ಕೆ ಮೊಗರು ಎಂಬಲ್ಲಿನ ಅಮ್ಮು ನಾಯ್ಕ ಎಂಬವರ ಪುತ್ರ ಸೀತಾರಾಮ (೪೯) ಮೃತಪಟ್ಟ ದುರ್ದೈವಿಯಾಗಿದ್ದಾರೆ.  ನಿನ್ನೆ ಸಂಜೆ ೪.೩೦ರ ವೇಳೆ ಅಡ್ಕಸ್ಥಳ ಬಳಿಯ ಕೋಡಿಲ   ಬಾಳೆಮೂಲೆ ಎಂಬಲ್ಲಿ ಅಪ ಘಾತ ಸಂಭವಿಸಿತ್ತು. ಸೀತಾರಾಮ ಸಂಚರಿಸುತ್ತಿದ್ದ ಬೈಕ್‌ಗೆ ಆಲ್ಟೋ ಕಾರು ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಸೀತಾರಾಮರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಅವರು ಮೃತಪಟ್ಟರು.

ಮೃತರು ತಂದೆ, ತಾಯಿ ಸರಸ್ವತಿ, ಪತ್ನಿ ವಾರಿಜ, ಮಕ್ಕಳಾದ ಸಂಕೇಶ್, ಅಕ್ಷತಾ, ಸಹೋದರ ಮಹಾಲಿಂಗ, ಸಹೋದರಿ ಲೀಲಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಅಪಘಾತ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

You cannot copy contents of this page