ಅಣಂಗೂರಿನಲ್ಲಿ ಶೌರ್ಯ ಸ್ವಯಂ ಸೇವಕರ ತರಬೇತಿ ಕಾರ್ಯಗಾರ
ಅಣಂಗೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್, ಶೌರ್ಯ ವಿಪತ್ತು ನಿರ್ವ ಹಣಾ ಸಮಿತಿ ಕಾಸರಗೋಡು- ಮಂಜೇಶ್ವರ ತಾಲೂಕಿನ ಶೌರ್ಯ ಸ್ವಯಂ ಸೇವಕರ ತರಬೇತಿ ಕಾರ್ಯ ಗಾರ ಅಣಂಗೂರು ಶ್ರೀ ಶಾರದಾಂಬ ಸಭಾಂಗಣದಲ್ಲಿ ನಡೆಸಲಾಯಿತು. ಕಾಸರ ಗೋಡು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮುಗಂ ಅಧ್ಯಕ್ಷತೆ ವಹಿಸಿದರು. ಕಾರ್ಯಗಾರ ವನ್ನು ಕಾಸರಗೋಡು ಪೊಲೀಸ್ ಅಧಿಕಾರಿ ರಾಜೀವನ್ ದೀಪ ಬೆಳಗಿಸಿ ಉದ್ಘಾಟಿಸಿ ಕಳೆದ 5 ವರ್ಷಗಳಿಂದ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಶೌರ್ಯ ಸ್ವಯಂ ಸೇವಕರಿಗೆ ಶುಭ ಹಾರೈಸಿದರು. ಬಾಬು ನಾಯ್ಕ ಎಸ್. ಪ್ರಾಸ್ತಾವಿಕ ಮಾತುಗಳನ್ನಾಡಿದರು.
ತಾಲೂಕು ಜನಜಾಗೃತಿ ವೇದಿಕೆ ಮಂಜೇಶ್ವರ ಇದರ ಅಧ್ಯಕ್ಷ ಜಯ ಪ್ರಕಾಶ್ ತೊಟ್ಟಿತ್ತೋಡಿ, ತಾಲೂಕು ಭಜನಾ ಪರಿಷತ್ ಕಾಸರಗೋಡು ಅಧ್ಯಕ್ಷ ವೆಂಕಟರಮಣ ಹೊಳ್ಳ ಶುಭ ಹಾರೈಸಿದರು.
ವಿವೇಕ್ ಪಾಯಸ್ ಮಾರ್ಗ ದರ್ಶನ ನೀಡಿದರು. ಕೇಂದ್ರ ಒಕ್ಕೂಟದ ಅಧ್ಯಕ್ಷ ಜ್ಞಾನೇಶ್ ಆಚಾರ್ಯ, ಯೋಜನಾಧಿಕಾರಿ ಗಳಾದ ಮಾಧವ ಗೌಡ, ಜೈವಂತ್ ಪಟಗಾರ, ಗಣೇಶ್ ಆಚಾರ್ಯ, ಜಗದೀಶ್, ಪ್ರದೀಪ್ ಕಿರಣ್, ಕ್ಯಾಪ್ಟನ್ ಗಳಾದ ರವಿಕುಮಾರ್, ಸುರೇಂದ್ರ ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ಕಾಸರಗೋಡು ಮಂಜೇಶ್ವರ ತಾಲೂಕಿನ ಶೌರ್ಯ ಘಟಕಗಳ ಸಂಯೋಜಕರು, ಘಟಕ ಪ್ರತಿನಿಧಿಗಳು, ಸ್ವಯಂ ಸೇವಕರು ಭಾಗವಹಿಸಿದ್ದರು. ಕಾಸರಗೋಡು ತಾಲೂಕು ಕ್ಷೇತ್ರ ಯೋಜನಾಧಿಕಾರಿ ದಿನೇಶ್ ಸ್ವಾಗತಿಸಿ, ಮಂಜೇಶ್ವರ ತಾಲೂಕು ಕ್ಷೇತ್ರ ಯೋಜನಾಧಿಕಾರಿ ಶಶಿಕಲಾ ಸುವರ್ಣ ವಂದಿಸಿದರು. ಮೇಲ್ವಿಚಾರಕ ಗೋಪಾಲಕೃಷ್ಣ ನಿರೂಪಿಸಿದರು.