ಅನಧಿಕೃತ ಮರಳು ಸಾಗಾಟ ಕೇಂದ್ರಗಳಿಗೆ ಪೊಲೀಸ್ ದಾಳಿ: ದೋಣಿಗಳ ನಾಶ
ಕಾಸರಗೋಡು: ಅನಧಿಕೃತವಾಗಿ ಮರಳುಗಾರಿಕೆ ನಡೆಸುತ್ತಿರುವ ಕೇಂದ್ರಗಳ ವಿರುದ್ಧ ಪೊಲೀಸರು ಕಠಿಣ ಕ್ರಮ ಜರಗಿಸತೊಡಗಿದ್ದಾರೆ. ಇದರಂತೆ ಮೊಗ್ರಾಲ್ ಪುತ್ತೂರು ಪಂಚಾಯತ್ಗೊಳಪಟ್ಟ ಪ್ರದೇಶಗಳಲ್ಲಿ ಅಕ್ರಮವಾಗಿ ಕಾರ್ಯವೆಸಗುತ್ತಿರುವ ಮರಳು ಸಾಗಾಟ ಕೇಂದ್ರಗಳಿಗೆ ಕಾಸರಗೋಡು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ರ ನೇತೃತ್ವದ ಪೊಲೀಸರು ಕ್ಷಿಪ್ರ ದಾಳಿ ನಡೆಸಿದ್ದಾರೆ. ಮಾತ್ರವಲ್ಲ ಅಕ್ರಮವಾಗಿ ಮರಳು ಸಾಗಿಸಲು ಬಳಸಲಾಗುತ್ತಿದ್ದ ೧೨ ದೋಣಿಗಳನ್ನು ಜೆಸಿಬಿ ಬಳಸಿ ಅಲ್ಲೇ ನಾಶಗೊಳಿಸಿದ್ದಾರೆ.
ರಾತ್ರಿ ವೇಳೆ ಹೊಳೆಗಳಿಂದ ಅಕ್ರಮವಾಗಿ ಹೊಗೆ ಸಾಗಿಸಲಾಗು ತ್ತಿದೆ ಎಂಬ ಹಲವು ಗುಪ್ತ ದೂರುಗಳು ಲಭಿಸತೊಡಗಿವೆ. ಅದರ ಆಧಾರದಲ್ಲಿ ಪೊಲೀಸರು ಇಂತಹ ಕಾರ್ಯಾಚರಣೆ ಆರಂಭಿಸಿ ದ್ದಾರೆ. ಈ ಪೊಲೀಸ್ ಕಾರ್ಯಾ ಚರಣೆ ಯಲ್ಲಿ ಎಸ್ಐಗಳಾದ ಎ.ವಿ. ವಿಷ್ಣುಪ್ರಸಾದ್, ಜೋಸೆಫ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ಗಳಾದ ಅಬ್ದುಲ್ ಜಲೀಲ್, ರತೀಶ್, ನೀರಜ್ ಮತ್ತು ಅಜೆಯ್ ವಿಲ್ಸನ್ ಎಂಬವರು ಒಳಗೊಂಡಿದ್ದರು.