‘ಅರಣ್ಯ ಹಕ್ಕು ಕಾನೂನು ೨೦೦೬’ ವಿಚಾರಗೋಷ್ಠಿ
ಕಾಸರಗೋಡು: ಜಿಲ್ಲಾ ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆ ಆಯೋ ಜಿಸಿದ ಅರಣ್ಯ ಹಕ್ಕು ಕಾನೂನು ೨೦೦೬ ವಿಚಾರಗೋಷ್ಠಿಯನ್ನು ಜಿಲ್ಲಾ ಪಂ. ಅಧ್ಯಕ್ಷೆ ಪಿ. ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಜಿಲ್ಲೆಯಲ್ಲಿ ಅರಣ್ಯಕ್ಕೆ ಹೊಂದಿಕೊಂಡು ವಾಸಿಸುವ ಪರಿಶಿಷ್ಟ ಪಂಗಡದವರಿಗೆ ಅರಣ್ಯ ಹಕ್ಕು ಕಾನೂನಿನ ಸೌಲಭ್ಯಗಳೆಲ್ಲ ಲಭಿಸುವುದಾಗಿ ಪಿ. ಬೇಬಿ ಬಾಲಕೃಷ್ಣನ್ ನುಡಿದರು. ಕೊಡುಂಗಲ್ಲೂರು ಎಂ.ಇ.ಎಸ್. ಅಸ್ಮಾಬಿ ಕಾಲೇಜು ಅಸಿಸ್ಟೆಂಟ್ ಪ್ರೊ. ಡಾ. ಕೆ.ಎಚ್. ಅಮಿತಾಬಚ್ಚನ್ ಅರಣ್ಯ ಹಕ್ಕು ಕಾನೂನಿನ ಬಗ್ಗೆ ವಿಷಯ ಮಂಡಿಸಿದರು. ಜಿಲ್ಲಾ ಯೋಜನಾ ಸಭಾಂಗಣದಲ್ಲಿ ಕಾರ್ಯಕ್ರಮ ನಡೆದಿದ್ದು, ಕರಿಂದಳಂ ಪಂಚಾಯತ್ ಉಪಾಧ್ಯಕ್ಷೆ ಟಿ.ಪಿ. ಶಾಂತಾ ಅಧ್ಯಕ್ಷತೆ ವಹಿಸಿದರು. ವಿವಿಧ ಪಂಚಾಯತ್‌ಗಳ ಅಧ್ಯಕ್ಷರಾದ ಗಿರಿಜ (ವೆಸ್ಟ್ ಎಳೇರಿ), ಟಿ.ಕೆ. ನಾರಾಯಣನ್ (ಕಳ್ಳಾರ್), ಎ.ವಿ. ಉಷಾ (ದೇಲಂಪಾಡಿ), ಎಸ್. ಭಾರತಿ (ವರ್ಕಾಡಿ) ಮಾತನಾಡಿದರು. ಜಿಲ್ಲಾ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ಎಂ. ಮಲ್ಲಿಕಾ ಸ್ವಾಗತಿಸಿ, ಡಾ. ಅಪರ್ಣ ವಿಲ್ಸನ್ ವಂದಿಸಿದರು.