ಅಸೌಖ್ಯ ಬಾಧಿಸಿ ಪ್ಲಸ್‌ವನ್ ವಿದ್ಯಾರ್ಥಿನಿ ಮೃತ್ಯು

ಕಾಸರಗೋಡು: ಅವಯವ ಬದಲಾಯಿಸುವ ಶಸ್ತ್ರಚಿಕಿತ್ಸೆಗೊಳ ಗಾಗಿದ್ದ ಪ್ಲಸ್ ವನ್ ವಿದ್ಯಾರ್ಥಿನಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ವನ್ ವಿದ್ಯಾರ್ಥಿನಿ ಪೊಯಿನಾಚಿ ಪೂಕುನ್ನತ್ತ್‌ನ  ಹುಸೈನ್-ಕೆ.ಎ. ಫಾತಿಮತ್ ರಸೀನ ದಂಪತಿಯ ಪುತ್ರಿ   ರಮೀಸ ತಸ್ನೀಮಾ (16) ಮೃತಪಟ್ಟ ಬಾಲಕಿ. ರಕ್ತ ಸಂಬಂಧ ಅಸೌಖ್ಯದಿಂ ದ ಚಿಕಿತ್ಸೆಯಲ್ಲಿದ್ದ ರಮೀಸಳ  ಅವ ಯವ ಬದಲಾವಣೆ ಶಸ್ತ್ರಚಿಕಿತ್ಸೆ ಇತ್ತೀಚೆಗೆ ನಡೆದಿತ್ತು. ಅನಂತರ ರೋಗ ವಾಸಿಯಾಗಿದ್ದರೂ ಅಲ್ಪ ದಿನಗಳಿಂದ  ಆರೋಗ್ಯ ಸ್ಥಿತಿಯಲ್ಲಿ ಬದಲಾವಣೆ ಉಂಟಾಗಿತ್ತು. ಕಲ್ಲಿಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ  ಬಾಲಕಿ ನಿನ್ನೆ ರಾತ್ರಿ ಮೃತಪಟ್ಟಳು.

Leave a Reply

Your email address will not be published. Required fields are marked *

You cannot copy content of this page