ಎದೆನೋವು: ಶಸ್ತ್ರಚಿಕಿತ್ಸೆಗೊಳಗಾದ ಹೋಟೆಲ್ ನೌಕರ ನಿಧನ

ಕುಂಬಳೆ: ಹಲವು ವರ್ಷಗಳಿಂದ ಕುಂಬಳೆಯಲ್ಲಿ ಹೋಟೆಲ್ ನೌಕರನಾಗಿದ್ದು, ಕುಂಬಳೆ ಪೆಟ್ರೋಲ್ ಬಂಕ್ ಬಳಿಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಚಂದ್ರನ್ (70) ನಿಧನ ಹೊಂದಿದರು.  ನಾಲ್ಕು ದಿನಗಳ ಹಿಂದೆ ಇವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆ ಯಲ್ಲಿ ದಾಖಲಿಸಲಾಗಿತ್ತು. ಕೂಡಲೇ ಶಸ್ತ್ರ ಚಿಕಿತ್ಸೆ ನಡೆಸಬೇಕೆಂದು ಆಸ್ಪತ್ರೆ ಅಧಿಕಾರಿಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಆದರೆ ಅನಂತರ ಅವರು ಅರೆಪ್ರಜ್ಞಾವಸ್ಥೆ ಯಲ್ಲಿದ್ದರು. ಇದರಿಂದ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಅವರಿಗೆಚಿಕಿತ್ಸೆ ಮುಂದುವರಿಸ ಲಾಯಿತು. ಆದರೆ ಗುಣಮುಖ ರಾಗದ ಕಾರಣ  ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಲಾಯಿತು. ಇದರಂತೆ ಮೊನ್ನೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ನಿನ್ನೆ ಮಧ್ಯಾಹ್ನ ಚಂದ್ರನ್ ಮೃತಪಟ್ಟರು.

ಮೃತರು ಪತ್ನಿ ಸೀತಾ, ಪುತ್ರಿ ದಿವ್ಯ, ಅಳಿಯ ನವೀನ್, ಸಹೋದರ ಶ್ರೀಧರ, ಸಹೋದರಿಯರಾದ ಸರೋಜಿನಿ, ಸೀತಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page