ಹೊಸಕಟ್ಟೆ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಹೊಸಂಗಡಿ: ಹೊಸಕಟ್ಟೆ ಶ್ರೀ ರಕ್ತೇಶ್ವರಿ ದೈವ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಎಪ್ರಿಲ್ ೨೩ರಂದು ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಶ್ರೀ ರಾಜೇಶ್ ತಾಳಿತ್ತಾಯ ಬಿಡುಗಡೆಗೊಳಿಸಿದರು. ಈ ವೇಳೆ ಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತ, ಸಮಿತಿ ಗೌರವಾಧ್ಯಕ್ಷ ರಾಮ ಪ್ರಕಾಶ್ ಆಳ್ವ, ಅಧ್ಯಕ್ಷ ಚಂದ್ರಹಾಸ ವರ್ಕಾಡಿ, ಕಾರ್ಯಾಧ್ಯಕ್ಷ ಚೆನ್ನಪ್ಪ ವರ್ಕಾಡಿ, ಸೇವಾ ಟ್ರಸ್ಟ್ ಅಧ್ಯಕ್ಷ ದಾಮೋದರ ಸಿ, ಆಡಳಿತ ಮೊಕ್ತೇಸರ ಮನೋಜ್ ಹೊಸಕಟ್ಟೆ ಭಾಗವಹಿಸಿದರು.

ಇದೇ ವೇಳೆ ಕ್ಷೇತ್ರದ ನಾಗ ದೇವರ ಕಟ್ಟೆಗೆ ಶಿಲಾನ್ಯಾಸ ನಡೆಸಲಾಯಿತು.

You cannot copy contents of this page