ಆನೆ ಸವಾರಿ ಕೇಂದ್ರದಲ್ಲಿ ಆನೆ ತುಳಿತದಿಂದ ಮಾವುತ ಸಾವು

ತೊಡುಪುಳ:  ಕಲ್ಲಾರ್‌ನ ಖಾಸಗಿ ಆನೆ ಸವಾರಿ ಕೇಂದ್ರದಲ್ಲಿ ಆನೆಯ ತುಳಿತಕ್ಕೊಳಗಾಗಿ ಎರಡನೇ ಮಾವುತ ಮೃತಪಟ್ಟ ಘಟನೆ ನಡೆದಿದೆ. ನೀಲೇಶ್ವರ ಕಾಲಿಚ್ಚಾಮರ ಕುಂಞಿಪ್ಪಾರ ನಿವಾಸಿ ಮೇಲೆಕಂಡಿ ವೀಟಿಲ್ ಬಾಲಕೃಷ್ಣನ್ (62) ಎಂಬವರು ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ 6.30ರ ವೇಳೆ  ಕೇರಳ  ಫಾಂ ಎಂಬ ಆನೆ ಸವಾರಿ ಕೇಂದ್ರದಲ್ಲಿ ಘಟನೆ ನಡೆದಿದೆ. ಸಂದರ್ಶಕರನ್ನು  ಹತ್ತಿಸಲೆಂದು ಆನೆಯನ್ನು ಸಮತಟ್ಟಾದ ಸ್ಥಳದಲ್ಲಿ ನಿಲ್ಲಿಸುತ್ತಿದ್ದಾಗ ಬಾಲಕೃಷ್ಣನ್‌ರಿಗೆ ಆನೆ ತುಳಿದಿದೆ. ಅಲ್ಲದೆ ಸೊಂಡಿಲಿನಿಂದ ಎತ್ತಿ ಎಸೆದಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಅಡಿಮಾಲಿ ತಾಲೂಕು ಆಸ್ಪತ್ರೆಗೆ ತಲುಪಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಕ್ಕೆ  ಬಿಟ್ಟುಕೊಡಲಾಯಿತು.

RELATED NEWS

You cannot copy contents of this page