ಆರೋಗ್ಯ ಸಚಿವೆ ರಾಜೀನಾಮೆಗೆ ಒತ್ತಾಯಿಸಿ ಬದಿಯಡ್ಕದಲ್ಲಿ ಕಾಂಗ್ರೆಸ್‌ನಿಂದ ಮೆರವಣಿಗೆ
ಬದಿಯಡ್ಕ: ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆ ಕಟ್ಟಡ ಕುಸಿದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿ ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ ರಾಜೀನಾಮೆ ನೀಡಬೇ ಕೆಂದು ಒತ್ತಾಯಿಸಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ನಡೆದ ಸಭೆಯಲ್ಲಿ ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು.
ಕರ್ಷಕ ಕಾಂಗ್ರೆಸ್ ಬ್ಲೋಕ್ ಅಧ್ಯಕ್ಷ ತಿರುಪತಿ ಕುಮಾರ್ ಭಟ್ ಉದ್ಘಾಟಿಸಿದರು. ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ್ ಬದಿಯಡ್ಕ, ಬ್ಲೋಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಶಾಫಿ ಗೋಳಿಯಡ್ಕ, ಚಂದ್ರಹಾಸ ಮಾಸ್ತರ್, ಮಂಡಲ ನೇತಾರರಾದ ಕೃಷ್ಣದಾಸ್, ಲೋಹಿತಾಕ್ಷನ್ ನಾಯರ್, ಐಎಂಟಿಯುಸಿ ಮಂಡಲ ಅಧ್ಯಕ್ಷ ಸತೀಶ್ ಪೆರುಮುಂಡ, ನೇತಾರರಾದ ಖಮರುದ್ದೀನ್, ವಿನ್ಸೆಂಟ್, ರಾಮ ಕೃಷ್ಣನ್, ಜೋನಿ, ನಿಜೀಶ್ ಪಟ್ಟಾಜೆ ಮೊದಲಾದವರು ನೇತೃತ್ವ ವಹಿಸಿದರು.