ಆರೋಗ್ಯ ಸಚಿವೆ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ ಜನರಲ್ ಆಸ್ಪತ್ರೆಗೆ ಮಾರ್ಚ್
ಕಾಸರಗೋಡು: ಕೋಟ್ಟಯಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಕಟ್ಟಡ ಕುಸಿದು ಓರ್ವೆ ಮಹಿಳೆ ಮೃತಪಟ್ಟ ಘಟನೆಗೆ ಸಂಬಂಧಿಸಿ ರಾಜ್ಯ ಆರೋಗ್ಯ ಸಚಿವೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ನೇತೃತ್ವದಲ್ಲಿ ನಿನ್ನೆ ಕಾಸರಗೋಡು ಜನರಲ್ ಆಸ್ಪತ್ರೆಗೆ ಮಾರ್ಚ್ ನಡೆಸಲಾಯಿತು.
ಹೊಸ ಬಸ್ ನಿಲ್ದಾಣ ಪರಿಸರದಿಂದ ಆರಂಭಿಸಿದ ಮಾರ್ಚ್‌ಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ಆರ್. ಸುನಿಲ್, ಎನ್. ಬಾಬುರಾಜ್, ಮನುಲಾಲ್ ಮೇಲತ್ತ್, ಹಿರಿಯ ನೇತಾರರಾದ ಸವಿತಾ ಟೀಚರ್, ಸತೀಶ್ಚಂದ್ರ ಭಂಡಾರಿ, ಪಿ. ರಮೇಶ್, ವಿ. ರವೀಂದ್ರನ್, ಪದಾಧಿಕಾರಿಗ ಳಾದ ಪುಷ್ಪಾ ಗೋಪಾಲ, ಎಂ. ಬಲ್‌ರಾಜ್, ಪ್ರಮೀಳಾ ಮಜಲ್, ಲೋಕೇಶ್ ನೋಂಡ, ಮಹೇಶ್ ಗೋಪಾಲ್, ಎನ್. ಮಧು, ಕೆ.ಎಂ. ಅಶ್ವಿನಿ, ಎಂ. ಜನನಿ, ವೀಣಾ ಅರುಣ್ ಶೆಟ್ಟಿ, ಸಂಜೀವ ಪುಳ್ಕೂರು, ಬೆಳ್ಳೂರು ಪಂಚಾಯತ್ ಅಧ್ಯಕ್ಷ ಶ್ರೀಧರ ಮೊದಲಾದವರು ನೇತೃತ್ವ ನೀಡಿದರು.
ಇದೇ ವೇಳೆ ಮಾರ್ಚ್‌ಗೆ ಪೊಲೀಸರು ತಡೆಯೊಡ್ಡಿದ್ದು, ಈ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ನೂಕುನುಗ್ಗಲು ಸೃಷ್ಟಿಯಾಯಿತು. ಪೊಲೀಸರು ಜಲಪಿರಂಗಿ ಪ್ರಯೋಗಿಸಿದರು. ಈ ವೇಳೆ ಬಿಜೆಪಿ ಮಧೂರು ಪಂಚಾಯತ್ ಅಧ್ಯಕ್ಷ ಮಾಧವ ಮಾಸ್ತರ್ ಬಿದ್ದು ಗಾಯಗೊಂಡರು. ಅವರನ್ನು ತಕ್ಷಣ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.