ಆರೋಗ್ಯ ಸಚಿವೆ ವೀಣಾ ಜೋರ್ಜ್‌ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ
ಪೈವಳಿಕೆ: ಕೇರಳದ ಆರೋಗ್ಯ ರಂಗ ಸಂಪೂರ್ಣ ಹದಗೆಟ್ಟಿದ್ದು ಕೋಟ್ಟಯಂ ಮೆಡಿಕಲ್ ಕಾಲೇಜಿನ ಕಟ್ಟಡ ಕುಸಿದು ಮಹಿಳೆ ಸಾವಿಗೀಡಾಗಿದ್ದ ಘಟನೆ ರಾಜ್ಯವೇ ತಲೆತಗ್ಗಿಸುವಂತೆ ಮಾಡಿದೆ. ಈ ಹಿನ್ನಲೆಯಲ್ಲಿ ಕೇರಳದ ಆರೋಗ್ಯ ಸಚಿವೆ ವೀಣಾ ಜೋರ್ಜ್ ಕೂಡಲೇ ರಾಜೀನಾಮೆ ನೀಡಬೇಕೆಂದು ಪೈವಳಿಕೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಒತ್ತಾಯಿಸಿದರು. ಕೆಪಿಸಿಸಿ ಸೂಚನೆ ಪ್ರಕಾರ ರಾಜ್ಯದಾದ್ಯಂತ ಸಚಿವರ ರಾಜೀನಾಮೆಗೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಯಂಗವಾಗಿ ಪೈವಳಿಕೆ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಪೈವಳಿಕೆ ನಗರದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಲಕ್ಷ್ಮಣ ಪ್ರಭು ಕುಂಬಳೆ, ರಾಘವೇಂದ್ರ ಭಟ್, ಶಾಜಿ ಎನ್.ಸಿ, ಅಬ್ದುಲ್ಲ ಹಾಜಿ, ಸುಬ್ರಾಯ ಸಾಯ, ಲತೀಫ್ ಕೋಡಿ, ಮುಸ್ತಫ ಪದವು, ಮುಹಮ್ಮದ್ ಜೋಡುಕಲ್ಲು, ರಮೇಶ ಅಶ್ವತ್ಥಕಟ್ಟೆ, ಮೊಯ್ದೀನ್ ಕುಂಞಿ, ಎಡ್ವರ್ಡ್, ರವಿಚಂದ್ರ ಬಲ್ಲಾಳ್ ಭಾಗವಹಿಸಿದರು. ಶಿವರಾಮ ಶೆಟ್ಟಿ ಸ್ವಾಗತಿಸಿ, ಗಂಗಾಧರ ನಾಯ್ಕ ವಂದಿಸಿದರು.