ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇಶನ್‌ನಿಂದ ಪರಿಸರ ದಿನಾಚರಣೆ

ಕಾಸರಗೋಡು: ಆಲ್ ಕೇರಳ ಫೊಟೋಗ್ರಾಫರ್ಸ್ ಅಸೋಸಿಯೇ ಶನ್ ಕಾಸರಗೋಡು ಈಸ್ಟ್ ಘಟಕದ ಆಶ್ರಯದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಘಟಕದ ಸದಸ್ಯರಿಗೂ, ಸ್ಥಳೀಯರಿಗೂ ಫಲವೃಕ್ಷ ಗಿಡಗಳನ್ನು ವಿತರಿಸಲಾಯಿತು. ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಡೆದ ಕಾರ್ಯಕ್ರಮವನ್ನು ವಲಯ ಕೋಶಾಧಿಕಾರಿ ವಾಮನ್ ಕುಮಾರ್ ಉದ್ಘಾಟಿಸಿದರು. ಘಟಕದ ಮಹಿಳಾ ಸದಸ್ಯೆ ಪ್ರಿಯಳಿಗೆ ಗಿಡ ನೀಡಿ ಉದ್ಘಾಟನೆ ನೆರವೇರಿಸಲಾಯಿತು. ಘಟಕಾಧ್ಯಕ್ಷ ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ನ್ಯಾಚುರಲ್ ಕ್ಲಬ್ ಕೋ-ಆರ್ಡಿನೇಟರ್ ದಿನೇಶ್, ಜಿಲ್ಲಾ ಸಮಿತಿ ಸದಸ್ಯ ಸುರೇಶ್‌ಚಂದ್ರ, ಮನೀಶ್, ಮಣಿ, ಸಂಜೀವ ರೈ, ರಾಜಶೇಖರ, ದೀಪು, ಶಿಬಿನ್, ಮಣಿಕಂಠನ್ ಭಾಗವಹಿಸಿದರು.

RELATED NEWS

You cannot copy contents of this page