ಕೆಲಸ ಭರವಸೆ ನೀಡಿ ಕರ್ನಾಟಕ ನಿವಾಸಿ ಯುವತಿಯನ್ನು ಅಂಬಲತ್ತರಕ್ಕೆ ಕರೆತಂದು ಮಾನಭಂಗ: ಇಬ್ಬರ ವಿರುದ್ಧ ಕೇಸು

ಕಾಸರಗೋಡು: ಉದ್ಯೋಗ ಭರವಸೆ ನೀಡಿ ಕರ್ನಾಟಕ ನಿವಾಸಿ ಯುವತಿಯನ್ನು ಅಂಬಲತ್ತರಕ್ಕೆ ಕರೆತಂದು ಮಾನಭಂಗ ಗೈದಿರುವು ದಾಗಿ ದೂರಲಾಗಿದೆ. ೩೦ರ ಹರೆಯದ ಯುವತಿ ನೀಡಿದ ದೂರಿನಂತೆ ಇರಿಯದ ಬಶೀರ್, ಪಳ್ಳಿಕೆರೆಯ ಆಶಿಕ್ ಎಂಬಿವರ ವಿರುದ್ಧ ಅಂಬಲತ್ತರ ಪೊಲೀಸರು ಕೇಸು ದಾಖಲಿಸಿದ್ದಾರೆ. ಜನವರಿ, ಮಾರ್ಚ್ ತಿಂಗಳುಗಳಲ್ಲಿ ಪ್ರಕರಣಕ್ಕೆ ಆಸ್ಪದವಾದ ಘಟನೆ ಜರಗಿದೆ. ಕೆಲಸ ನೀಡುವುದಾಗಿ ತಾಯಿಗೆ ಭರವಸೆ ಕೊಟ್ಟು ಆರೋಪಿಗಳಲ್ಲಿ ಓರ್ವ ಯುವತಿಯನ್ನು ಜೊತೆಗೆ ಕರೆದುಕೊಂಡು ಬಂದಿರುವುದಾಗಿ ಹೇಳಲಾಗುತ್ತಿದೆ. ಅದರ ಬಳಿಕ ಅಂಬಲತ್ತರಕ್ಕೆ ಕೊಂಡೊಯ್ದು ಒಂದು ಮನೆಯಲ್ಲಿ ವಾಸಕ್ಕೆ ವ್ಯವಸ್ಥೆ ಮಾಡಿ ಮಾನಭಂಗಗೈದಿರುವುದಾಗಿ ಹೇಳಲಾಗುತ್ತಿದೆ. ಬಳಿಕ ಮನೆ ಕೆಲಸ ಕ್ಕೆಂದು ತಿಳಿಸಿ ಯುವತಿಯನ್ನು ಪಳ್ಳಿ ಕೆರೆ ನಿವಾಸಿಗೆ ಹಸ್ತಾಂತರಿಸಿರು ವುದಾಗಿ ದೂರಲಾಗಿದೆ. ಅಲ್ಲಿಯೂ ದೌರ್ಜನ್ಯಗೈದ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿಗಳ ಪತ್ತೆಗೆ ಅಂಬಲತ್ತರ ಪೊಲೀಸರು ತನಿಖೆ ತೀವ್ರ ಗೊಳಿಸಿದ್ದಾರೆ.

RELATED NEWS

You cannot copy contents of this page