ಆಲ್ ಕೇರಳ ಫೋಟೋಗ್ರಾಫರ್ಸ್ ಈಸ್ಟ್ ಯೂನಿಟ್ ಸಮ್ಮೇಳನ

ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇ ಶನ್ ಕಾಸರಗೋಡು ಈಸ್ಟ್ ಯೂನಿಟ್ ಸಮ್ಮೇಳನ ಕಾಸರಗೋಡು ಎಕೆಆರ್ ಆರ್‌ಡಿ ಭವನದಲ್ಲಿ ಯೂನಿಟ್ ಅಧ್ಯಕ್ಷ ಅಜಿತ್ ಕುಮಾರ್‌ರ ಅಧ್ಯಕ್ಷತೆಯಲ್ಲಿ ಜರಗಿತು.  ವಲಯ ಅಧ್ಯಕ್ಷ ವಾಸು  ಎ ಉದ್ಘಾಟಿಸಿದರು.  ಫೋಟೋ ಪ್ರದರ್ಶನ ಏರ್ಪಡಿಸ ಲಾಯಿತು.  ಜಿಲ್ಲಾ ಅಧ್ಯಕ್ಷ ಕೆ.ಸಿ ಅಬ್ರಹಾಂ ಪ್ರದರ್ಶನ ಉದ್ಘಾಟಿಸಿದರು. ವಿವಿಧ ಹಂತಗಳಲ್ಲಿ ನಡೆಸಿದ ಫೋಟೋಗ್ರಾಫಿ ಸ್ಪರ್ಧೆಯಲ್ಲಿ ವಿಜೇತರಾದ ಘಟಕದ ಸದಸ್ಯರನ್ನು ಹಾಗೂ ರಕ್ತದಾನ ನಡೆಸಿದ ಸದಸ್ಯರನ್ನು ರಾಜ್ಯ ಕಾರ್ಯದರ್ಶಿ ಹರೀಶ್ ಪಾಲಕುನ್ನು ಅಭಿನಂದಿಸಿ ದರು. ಜಿಲ್ಲಾ ಕೋಶಾಧಿಕಾರಿ ಸುನಿಲ್ ಕುಮಾರ್ ಪಿ.ಟಿ, ಜಿಲ್ಲಾ ಜೊತೆ ಕಾರ್ಯದರ್ಶಿ ರಾಜೇಂದ್ರನ್ ವಿ.ಎನ್, ಜಿಲ್ಲಾ ನೇಚುರಲ್ ಕ್ಲಬ್ ಕೋ-ಆರ್ಡಿನೇಟರ್ ದಿನೇಶ್, ವಲಯ ಕೋಶಾಧಿಕಾರಿ  ವಾಮನ್ ಕುಮಾರ್, ಸುರೇಶ್ಚಂದ್ರ, ಮನು, ಮೈಂದಪ್ಪ, ಪ್ರಶಾಂತ್‌ಮಣಿ ಮಾತ ನಾಡಿದರು. ಘಟಕ ಕಾರ್ಯದರ್ಶಿ ಸುಜಿತ್  ಸ್ವಾಗತಿಸಿ, ಯೂನಿಟ್ ಪಿಆರ್‌ಒ ಮನೀಶ್ ವಂದಿಸಿದರು.

RELATED NEWS

You cannot copy contents of this page