ಇತಿಹಾಸ ಸೃಷ್ಟಿಸಿದ ಮಹಾಕುಂಭ ಮೇಳ: ತ್ರಿವೇಣಿ ಸಂಗಮದಲ್ಲಿ 50 ಕೋಟಿ ಭಕ್ತರಿಂದ ಪುಣ್ಯಸ್ನಾನ

ನವದೆಹಲಿ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳವು ಮತ್ತೊಂದು ಮೈಲುಗಲ್ಲು ಸೃಷ್ಟಿಸಿದೆ. ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಭಕ್ತರ ಸಂಖ್ಯೆ 50 ಕೋಟಿ ದಾಟಿದೆ. ಈ ಸಂಖ್ಯೆಯು ಎರಡು ದೇಶಗಳನ್ನು ಹೊರತುಪಡಿಸಿ ಉಳಿದೆಲ್ಲಾ ದೇಶಗಳ ಜನಸಂಖ್ಯೆಯನ್ನು ಮೀರುತ್ತಿದೆ.

ಉತ್ತರಪ್ರದೇಶ ಸರಕಾರ ಬಿಡುಗಡೆಮಾಡಿದ ಮಾಹಿತಿ ಪ್ರಕಾರ ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಅಥವಾ ಸಾಮಾಜಿಕ ಕಾರ್ಯಕ್ರಮಕ್ಕೆ ಇಷ್ಟೊಂದು ಭಕ್ತರು ಬಂದು ಸೇರುತ್ತಿರುವುದು ಇದೇ ಮೊದಲು ಆಗಿದೆ. ನಾವು ಸೇರಿದಂತೆ 50 ಕೋಟಿಗೂ ಹೆಚ್ಚು ಮಂದಿ ಕುಂಭಮೇ ಳದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಅದರ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ. ಇದು ಅದ್ಭುತವಾಗಿದೆಯೆಂದು ಸಂಬಂಧ ಪಟ್ಟವರು ತಿಳಿಸಿದ್ದಾರೆ.

144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭಮೇಳ ನಡೆಸಲು ೧೫ ಸಾವಿರ ಕೋಟಿ ರೂ. ವನ್ನು ಉತ್ತರಪ್ರದೇಶ ಸರಕಾರ ಖರ್ಚು ಮಾಡಿದೆ. ಸುಮಾರು ೫೫ ಕೋಟಿ ಭಕ್ತರು ಇಲ್ಲಿಗೆ ಆಗಮಿಸುವ ನಿರೀಕ್ಷೆಯಿದೆ. ಇದರಿಂದ ಉತ್ತರಪ್ರ ದೇಶದ ಆರ್ಥಿಕತೆಗೆ ಮೂರು ಲಕ್ಷ ಕೋಟಿ ರೂ.ಗಳ ಆದಾಯ ಈಗಾ ಗಲೇ ಬಂದಿ ರುವುದಾಗಿ ಅಂದಾಜಿ ಸಲಾಗಿದೆಯೆಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಆಧ್ಯಾತ್ಮಿಕ ಮೆಗಾ ಕಾರ್ಯಕ್ರಮವಿರುವುದರ ಜೊತೆಗೆ ಮಹಾ ಕುಂಭಮೇಳ ಭಾರತ ಮತ್ತು ಅದರಾಚೆಗಿನ ಸಹಸ್ರಾರು ಆಹಾರಪ್ರಿಯರಿಗೆ ಪಾಕಶಾಲೆಯ ತೀರ್ಥಯಾತ್ರೆಯಾಗಿಯೂ ಹೊರಹೊಮ್ಮುತ್ತಿದೆ. ಜನರಿಗೆ ಮಹಾಕುಂಭಮೇಳದಲ್ಲಿ ಪ್ರಸಾದ ರೂಪದಲ್ಲಿ ಬಡಿಸಲಾಗುತ್ತಿರುವ ಅತ್ಯುತ್ತಮ ಸಾತ್ವಿಕ ಪಾಕಪದ್ಧತಿಯನ್ನು ಸವಿಯುತ್ತಿದ್ದಾರೆ. 40 ಚದರ  ಕಿಲೋ ಮೀಟರ್ ವಿಸ್ತೀರ್ಣದ ಕುಂಭಮೇಳ ಪ್ರದೇಶದಲ್ಲಿ  ಒಂದು ಸಾವಿರಕ್ಕೂ ಹೆಚ್ಚು ಮಹಾಭಂಡಾರಗಳು ಮತ್ತು 500 ಸಾಂಪ್ರದಾಯಿಕ ಮೆಗಾ ಅಡುಗೆ ಮನೆಗಳೂ ದೈನಂದಿನ 24 ತಾಸುಗಳತನಕ  ಕಾರ್ಯವೆಸಗುತ್ತಿದೆ.

Leave a Reply

Your email address will not be published. Required fields are marked *

You cannot copy content of this page