ಗ್ಯಾಸ್ ಟ್ಯಾಂಕರ್ ಹಿಂಬದಿಗೆ ಗೂಡ್ಸ್ ಟೆಂಪೊ ಢಿಕ್ಕಿ ಹೊಡೆದು ಇಬ್ಬರು ಗಾಯ

ಉಪ್ಪಳ: ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್‌ನ ಹಿಂಭಾಗಕ್ಕೆ ಗೂಡ್ಸ್ ಟೆಂಪೋ ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡ ಘಟನೆ ರಾಷ್ಟಿಯ ಹೆದ್ದಾರಿ ಹನಫಿ ಬಜಾರ್‌ನಲ್ಲಿ ನಿನ್ನೆ ಸಂಜೆ ನಡೆದಿದೆ. ಟೆಂಪೋದಲ್ಲಿದ್ದ ಉಳ್ಳಾಲ ನಿವಾಸಿ ಬದ್ರುದ್ದೀನ್ (50), ನೌಷಾದ್ (30) ಎಂಬವರು ಗಂಭೀರ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ. ಮಂಗಳೂರು ಭಾಗದಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಗೂಡ್ಸ್ ಟೆಂಪೋ ಎದುರಿನಿಂದ ಸಂಚರಿಸುತಿದ್ದ ಗ್ಯಾಸ್ ಟ್ಯಾಂಕರ್‌ನ ಹಿಂಭಾಗಕ್ಕೆ ಡಿಕ್ಕಿಹೊಡೆದು ಅಪಘಾತ ಉಂಟಾಗಿದೆ. ಇದರಿಂದ ಟೆಂಪೋದ ಎದುರು ಭಾಗ ನಜ್ಜು-ಗುಜ್ಜಾಗಿದ್ದು, ಇಬ್ಬರು ಅದರೊಳಗೆ ಸಿಲುಕಿದ್ದರು. ಮಾಹಿತಿ ತಿಳಿದು ಉಪ್ಪಳ ಅಗ್ನಿಶಾಮಕದಳದ ಸ್ಟೇಷನ್ ಆಫೀಸರ್ ರಾಜೇಶ್ ಕುಮಾರ್ ನೇತೃತ್ವದಲ್ಲಿ ತಲುಪಿ ಅವರನ್ನು ಹೊರಕ್ಕೆ ತೆಗೆದು ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಿದ್ದಾರೆ. ಬಳಿಕ ಮಂಗಳೂರಿನಲ್ಲಿ ದಾಖಲಿಸಲಾಗಿದೆ. ಹೆದ್ದಾರಿಯಲ್ಲಿ ಅಲ್ಪ ಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಹೆದ್ದಾರಿ ಇಲಾಖೆ ಉದ್ಯೋಗಿಗಳು, ಹೈವೇ ಪೊಲೀಸರು ಸ್ಥಳಕ್ಕೆ ತಲುಪಿ ಸಂಚಾರವನ್ನು ಸುಗಮಗೊಳಿಸಿದ್ದಾರೆ.

RELATED NEWS

You cannot copy contents of this page